ಪ್ರಜ್ವಲ್ ರವರ ಮುಂದಿನ ರಾಜಕೀಯದ ಬಗ್ಗೆ ಭವಿಷ್ಯ ನುಡಿದ ದೇವೇಗೌಡ್ರು..!!
ಮೊಮ್ಮಗ ಪ್ರಜ್ವಲ್ ನನ್ನು ಹಾಸನದಲ್ಲಿಯೇ ಪ್ರಚಾರ ಮಾಡುವಂತೆ ಹೇಳಿದ್ದೇನೆ. ಅವನ ಕುರಿತು ಯಾರೂ ನಿರ್ಲಕ್ಷ್ಯ ಮಾಡಬೇಡಿ. ನಾನು ಕೂಡ ಹರದನಹಳ್ಳಿಯಲ್ಲಿ ಗೊಣ್ಣೆ ಸುರಿಸಿಕೊಂಡು ಇದ್ದವನು. ಬಳಿಕ ಪ್ರಧಾನಿ ಆಗಲಿಲ್ವೆ. ಅದೇ ರೀತಿ ಪ್ರಜ್ವಲ್ ರನ್ನು ನಿರ್ಲಕ್ಷಿಸ ಬೇಡಿ ಪ್ರಜ್ವಲ್ ನ ಮುಂದಿನ ಭವಿಷ್ಯ ಉಜ್ವಲವಾಗಿದೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು, ಪ್ರಜ್ವಲ್ ಮೊದಲು ಹಾಸನದ 7 ಸ್ಥಾನಗಳನ್ನ ಗೆಲ್ಲಿಸಿಕೊಂಡು ಬರಲಿ.., ಉಳಿದದ್ದು ನೋಡೋಣ ಎಂಬುದನ್ನು ನಾನೇ ಹೇಳಿರುವುದಾಗಿ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೇವೇಗೌಡರ ಮಕ್ಕಳ ಕುರಿತು ಮುಖ್ಯಮಂತ್ರಿಗೆ ಯಾಕಿಷ್ಟು ದ್ವೇಷ. ನನ್ನ ಮೊಮ್ಮಗನ ಕುರಿತು ಇಲ್ಲದ ಆರೋಪ ಮಾಡ್ತಾರೆ. ಕಾಂಗ್ರೆಸ್ ನವರು ಇಷ್ಟೊಂದು ಕೆಳಮಟ್ಟಕ್ಕೆ ಇಳಿದಿದ್ದಾರೆ. ಹಾಗಾದ್ರೆ ಕಾಂಗ್ರೆಸ್ ಮುಸ್ಲಿಂರನ್ನು ದತ್ತು ತೆಗೆದುಕೊಂಡಿದಿಯಾ?. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ? ಎಂದು ಪ್ರಶ್ನಿಸಿದರು. ಪ್ರಜ್ವಲ್ ಬಗ್ಗೆ ನಿರ್ಲಕ್ಷ್ಯ ಬೇಡ, ಆತನಿಗೆ ಇನ್ನು ಅವಕಾಶಗಳಿವೆ ಎಂದು ಹೇಳಿರುವ ದೇವೇಗೌಡರು ಭವಾನಿ ರೇವಣ್ಣ ಕಾರ್ಯಕರ್ತರೊಡನೆ ಮಾತನಾಡಿದ್ದಾರೆ ಎಂಬ ವಿಡಿಯೋ ಬಗ್ಗೆ ಯಾರೋ ಸ್ಟ್ರಿಂಗ್ ಆಪರೇಷನ್ ಮಾಡಿದ್ದಾರೆ. ಅವರು ಯಾರು ಎಂದು ನನಗೆ ಗೊತ್ತಿದೆ. ಏಕೆ ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದರು.
Comments