ಜೆಡಿಎಸ್ ಗೆ ಬೆಂಬಲಿಸಲು ನಾಮಪತ್ರ ವಾಪಸ್ ಪಡೆದ ಈ ನಾಯಕ..!!
ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಅವರನ್ನು ಬೆಂಬಲಿಸಲು ಪಕ್ಷೇತರ ಅಭ್ಯರ್ಥಿ ಎ.ಆರ್.ರಘು ಅವರು ತಮ್ಮ ನಾಮಪತ್ರವನ್ನು ವಾಪಸ್ ಪಡೆದರು.
ಇದಕ್ಕೂ ಮುನ್ನ ಅಕ್ಕಿಹೆಬ್ಬಾಳು ಗ್ರಾಮದ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ರಘು ಅವರು ತಮ್ಮ ನೂರಾರು ಬೆಂಬಲಿಗರ ಸಭೆ ನಡೆಸಿದರು. ಜೆಡಿಎಸ್ ಅಭ್ಯರ್ಥಿ ನಾರಾಯಣಗೌಡ ಅವರಿಗೆ ಬೆಂಬಲಿಸಬೇಕು. ನಾಮಪತ್ರ ವಾಪಸ್ ಪಡೆಯಬೇಕೆಂದು ಸಭೆಯಲ್ಲಿ ಹಲವರು ಅಭಿಪ್ರಾಯಪಟ್ಟರು. ಈ ಹಿನ್ನೆಲೆಯಲ್ಲಿ ನಾಮಪತ್ರ ವಾಪಸ್ ಪಡೆದು ಜೆಡಿಎಸ್ ಅಭ್ಯರ್ಥಿ ಪರವಾಗಿ ಕೆಲಸ ಮಾಡುವ ನಿರ್ಧಾರ ಕೈಗೊಂಡರು. ಶಾಸಕರ ಕೋರಿಕೆಯಂತೆ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಸಿಎಂ ಮಾಡಲು ಹಾಗೂ ತಾಲೂಕಿನಲ್ಲಿ ಉತ್ತಮ ಕೆಲಸಗಳನ್ನು ಮಾಡಿರುವ ಶಾಸಕ ನಾರಾಯಣಗೌಡ ಅವರು ಮತ್ತೊಮ್ಮೆ ಶಾಸಕರಾಗಬೇಕೆಂಬ ಕಾರಣಕ್ಕಾಗಿ ತಾವು ಕಣದಿಂದ ಹಿಂದೆ ಸರಿದು ಜೆಡಿಎಸ್ ಪಕ್ಷದ ಅವರ ಪರವಾಗಿ ಕೆಲಸ ಮಾಡಲು ಮುಂದಾಗಿರುವುದಾಗಿ ರಘು ತಿಳಿಸಿದರು.
Comments