ಚುನಾವಣಾ ಅಕ್ರಮ ಕಂಡಬಂದರೆ ವೀಕ್ಷರಿಗೆ ದೂರು ನೀಡಿ: ಪ್ರೇಮ್ ಕುಮಾರ್

26 Apr 2018 8:12 PM |
862 Report

ಕೊರಟಗೆರೆ ಏ26:- ಕೊರಟಗೆರೆ (ಪ.ಜಾತಿ ಮೀಸಲು) ವಿಧಾನ ಸಭಾ ಕ್ಷೇತ್ರಕ್ಕೆ(134) ಭಾರತ ಚುನಾವಣಾ ಆಯೋಗವು ಸಾಮಾನ್ಯ ಚುನಾವಣಾ ವೀಕ್ಷರಕನ್ನಾಗಿ ಪ್ರಭುಂಶು ಕುಮಾರ್ ಶ್ರೀವಾತ್ಸವ್(ಐ.ಎ.ಎಸ್) ರವರನ್ನು ನೇಮಕಮಾಡಲಾಗಿದ್ದು ಸಾರ್ವಜನಿಕರು ಚುನಾವಣೆಗೆ ಸಂಭಂದಪಟ್ಟತೆ ದೂರುಗಳಿದ್ದಲ್ಲಿ ಅವರಿಗೆ ನೀಡಬಹು ದಾಗಿದೆ ಎಂದು ಚುನಾವಣಾಧಿಕಾರಿ ಡಾ.ಪ್ರೇಮ್ಕುಮಾರ್ ತಿಳಿಸಿದ್ದಾರೆ.

ಸುದ್ದಿಘೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಕೊರಟಗೆರೆ ಮೀಸಲು ವಿಧಾನ ಸಭಾ ಕ್ಷೇತ್ರಕ್ಕೆ ಸಂಭಂದಿಸಿದಂತೆ ಭಾರತ ಚುನಾವಣಾ ಆಯೋಗವು ಏ.24 ರಿಂದ ಪ್ರಭುಂಶು ಕುಮಾರ್ ಶ್ರೀವಾತ್ಸವ್(ಐ.ಎ.ಎಸ್) ರವರನ್ನು ಸಮಾನ್ಯ ವೀಕ್ಷಕರನ್ನಾಗಿ ನೇಮಕ ಮಾಡಿದ್ದು ಅವರು ಲೋಕೋಪಯೋಗಿ ಇಲಾಖೆಯ ನಿರೀಕ್ಷಣಾ ಮಂದಿರದಲ್ಲಿ ವಾಸ್ತವ್ಯವಿದ್ದು ಸಾರ್ವಜನಿಕರು ಕೊರಟಗೆರೆ ವಿಧಾನ ಸಭಾ ಕ್ಷೇತ್ರಕ್ಕೆ ಸಂಭಂದಿಸಿದ ದೂರುಗಳಿದ್ದಲ್ಲಿ ದೂರವಾಣಿ (8277802942) ಮೂಲಕ ಅಥವಾ ಖುದ್ದು ದೂರು ಸಲ್ಲಿಸಲು ಅವಕಾಶವಿದೆ ಎಂದರು.
ಪ್ರತಿನಿತ್ಯ ಬೆಳಿಗ್ಗೆ 10 ರಿಂದ 11 ಗಂಟೆ ಅವಧಿಯಲ್ಲಿ ಸಂಪಕರ್ಿಸಬಹುದಾಗಿದ್ದು ತುತರ್ು ಸಂದರ್ಭದಲ್ಲಿ ಯಾವುದೇ ವ್ಯಕ್ತಿಯ ಮೊಬೈಲ್ ನಂಬರಿನಲ್ಲಿ ಸಮಯ ನಿಗದಿ ಪಡಿಸಿಕೊಂಡು ಸಂಪಕರ್ಿಸಬಹುದಾಗಿದೆ ಎಂದು ತಿಳಿಸಿದರು.
ವಿಜಯ್ಪ್ರವೀಣ್ ಬಾಕ್ಸ್ಲಾ ರವರನ್ನು ಚುನಾವಣೆಗೆ ಸಂಬಂದಿಸಿದ ಲೆಕ್ಕ ಪತ್ರ ಪರಿವೀಕ್ಷರನ್ನಾಗಿ ಭಾರತ ಚುನಾವಣ ಆಯೋಗ ನೇಮಿಸಿದ್ದು ಚುನಾವಣೆ ಗೆ ಸಂಬಂದಿಸಿದ ಲೆಕ್ಕಪತ್ರಗಳ ಬಗ್ಗೆ ಸಾರ್ವಜನಿಕರು ದೂರುಗಳಿದ್ದಲ್ಲಿ ದೂರವಾಣಿ (9002020151) ಮೂಲಕ ದೂರ ನೀಡಬಹುದೆಂದು ಹೇಳಿದರು.
ಮಾದರಿ ಮತ ಕೇಂದ್ರ:- ಕೊರಟಗೆರೆ ವಿಧಾನ ಸಭಾ ಕ್ಷೇತ್ರ(134) ಕ್ಕೆ ಸಂಬಂಧಸಿದಂತೆ ಪಟ್ಟಣದ ಬಾಲಕೀಯರ ಸಕರ್ಾರಿ ಪ್ರೌಢಶಾಲೆ ಮತಗಟ್ಟೆ ಸಂಖ್ಯೆ 93 ರಲ್ಲಿ ಮೂಲಭೂತ ಸೌಕರ್ಯಗಳೊಳಗೊಂಡತೆ ಮಾದರಿ ಮತ ಕೇಂದ್ರ ಸ್ಥಾಪಿಸುವುದಾಗಿ ಮತ್ತು ಪಟ್ಟಣದ ಸಕರ್ಾರಿ ಕಿರಿಯ ಕಾಲೇಜು ಮತಗಟ್ಟೆ ಸಂಖ್ಯೆ 93 ರಲ್ಲಿ ಎಲ್ಲಾ ಮಹಿಳಾ ಅಧಿಕಾರಿಗಳೇ ಕಾರ್ಯನಿರ್ವಹಿಸುವಂತ ಮಹಿಳಾ ಮತ ಕೇಂದ್ರ ಸ್ಥಾಪಿಸುವುದಾಗಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಉಪಚುನಾವಣಾಧಿಕಾರಿ ಗಿರೀಶ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎಲ್. ಮೋಹನ್ಕುಮಾರ್, ಆರ್.ಐ.ಗುರುಪ್ರಸಾದ್, ನರಸಿಂಹಮೂತರ್ಿ ಸೇರಿದಂತೆ ಇತರರು ಇದ್ದರು. (ಚಿತ್ರ ಇದೆ) 

Edited By

Raghavendra D.M

Reported By

Raghavendra D.M

Comments