ಮೊಬೈಲ್ ಕಳ್ಳನ ಬಂಧನ
ಕೊರಟಗೆರೆ ಏ.:- ತಾಲೂಕಿನ ಹೊಳವನಹಳ್ಳಿಯಲ್ಲಿ ಕೆಳದ ಫೆಬ್ರವರಿ ತಿಂಗಳಲ್ಲಿ ಮೊಬೈಲ್ ಅಂಗಡಿಯಲ್ಲಿ 1.72.156 ಲಕ್ಷರೂಗಳ ಬೆಲೆಬಾಳುವ 27 ಮೊಬೈಲ್ ಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಕೊರಟಗೆರೆ ಪೊಲೀಸ್ ಠಾಣಾ ಪಿಎಸೈ ಬಿ.ಸಿ ಮಂಜುನಾಥ್ ಮತ್ತವರ ತಂಡ ವಶಪಡಿಸಿಕೊಂಡಿದ್ದಾರೆ.
ಕಳೆದ 2018 ಫೆಬ್ರವರಿ 20 ರಂದು ತಾಲೂಕಿನ ಹೊಳವನಳ್ಳಿ ವಾಸಿ ಸೈಯದ್ಹುಸೇನ್ ಎಂಬುವರಿಗೆ ಸೇರಿದ ಮೊಬೈಲ್ ಅಂಗಡಿಯಲ್ಲಿ ಕಳ್ಳತನ ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿದ್ದ ಆರೋಪಿಯ ಬಂಧನಕ್ಕೆ ತನಿಖೆ ಪ್ರಾರಂಭಿಸಿದ ಪಿಎಸೈ ಮಂಜುನಾಥ್ ಆಪರಾದಿ ದೊಡ್ಡಬಳ್ಳಾಪುರ ನಗರವಾಸಿ ನಯಾಜ್ ಉರಷ್ ಅಮರ್ ಬಿನ್ ಲೇಟ್ ಕರೀಂಸಾಬ್ ಉರುಷ್ ಕೃಷ್ಣಪ್ಪ ಎಂಬ ಸುಳಿವು ದೊರೆತಿ ಆರೋಪಿ ಬಂಧನಕ್ಕೆ ಬಲೆ ಬೀಸಿದಾಗ ಆರೋಪಿ ಮತ್ತೊಂದು ಕಳ್ಳತನ ಪ್ರಕರಣದಲ್ಲಿ ದೊಡ್ಡಬಳ್ಳಾಪುರ ಪೊಲೀಸರು ಬಂದಿಸಿದ್ದ ತಿಳಿದು ಬಂದ ನಂತರ ಆರೋಪಿಯನ್ನು ದೊಡ್ಡಬಳ್ಳಾಪುರ ಪೊಲೀಸರಿಂದ ವಶಕ್ಕೆ ಪಡೆದು ಆರೋಪಿ ನೀಡಿದ ಸುಳಿವಿನ ಮೇರೆಗೆ 1.25 ಲಕ್ಷ ಬೆಲೆ ಬಾಳುವ 8 ಬೆಸಿಕ್ ಮೊಬೈಲ್ ಹಾಗೂ 8 ಸ್ಮಾಟರ್್ ಮೊಬೈಲ್ ಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ,ದಿವ್ಯ ವಿ.ಗೋಪಿನಾಥ್, ಹೆಚ್ಚುವರಿ ಪೊಲೀಸದ ಅಧೀಕ್ಷಕರಾದ ಡಾ.ವಿ.ಜೆ.ಶೋಬಾರಾಣಿ ಹಾಗೂ ಮಧುಗಿರಿ ಡಿವೈಎಸ್ಪಿ ಕಲ್ಲೇಶಪ್ಪ ಮಾರ್ಗದರ್ಶನದಲಿ ಕೊರಟಗೆರೆ ಪಿಎಸೈ ಮಂಜುನಾಥ್, ಸಿಬ್ಬಂದಿಗಳಾದ ಸೋಮನಾಥ್, ಮಂಜುನಾಥ್, ರಂಗನಾಥ್, ಚಂದ್ರಶೇಖರ್, ಚನ್ನಮಲ್ಲಿಕಾಜರ್ುನ್, ಪ್ರಶಾಂತ್, ಪಾಂಡುರಂಗರಾವ್ ಪ್ರಕರಣ ಪತ್ತೆಗೆ ಶ್ರಮಿಸಿದ್ದಾರೆ.
Comments