ಚೆಲುವರಾಯಸ್ವಾಮಿಗೆ ಸೆಡ್ಡು ಹೊಡೆಯಲು ರೆಬೆಲ್ ಸ್ಟಾರ್ ಅಂಬಿ ರಣತಂತ್ರ...!!



ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮಂಡ್ಯ ರಾಜಕೀಯ ರಂಗೇರುತ್ತಿದೆ. ಅಲ್ಲದೆ ರೆಬೆಲ್ ಸ್ಟಾರ್ ಅಂಬಿ ಚೆಲುವರಾಯಸ್ವಾಮಿಗೆ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ. ಕೆಲವು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಯನ್ನು ನೋಡಿದಾಗ ಅಂಬರೀಷ್ ಮತ್ತವರ ಬೆಂಬಲಿಗರು ಜಾತ್ಯತೀತ ಜನತಾ ದಳದ ತೆನೆ ಹಿಡಿಯಲು ಸಜ್ಜಾಗುತ್ತಿರುವುದು ಸ್ಪಷ್ಟವಾಗುತ್ತಿದೆ.
ಮಂಡ್ಯದಲ್ಲಿ ಚೆಲುವರಾಯಸ್ವಾಮಿಯ ಹಿಡಿತ ದುರ್ಬಲಗೊಳಿಸಲು ಅಂಬರೀಷ್ ಡಿಸೈಡ್ ಮಾಡಿದ್ದಾರೆನ್ನಲಾಗುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಬೆಂಬಲ ಕೊಡುವಂತೆ ಅಂಬರೀಷ್ ಅವರು ತಮ್ಮ ಆಪ್ತರಿಗೆ ಮತ್ತು ಬೆಂಬಲಿಗರಿಗೆ ಒಳಗೊಳಗೆ ಸೂಚನೆ ನೀಡುತ್ತಿದ್ಧಾರೆ. ಮದ್ದೂರಿನಲ್ಲಿ ಟಿಕೆಟ್ ವಂಚಿತೆ, ಅಂಬಿ ಆಪ್ತೆ ಕಲ್ಪನಾ ಸಿದ್ದರಾಜು ಅವರು ಜೆಡಿಎಸ್ಗೆ ಮರಳುವಂತೆ ಸೂಚಿಸಿದ್ದು ಇದೇ ಅಂಬಿಯೇ. ಶ್ರೀರಂಗಪಟ್ಟಣದ ಟಿಕೆಟ್ ವಂಚಿತ ಭಾಸ್ಕರ್ ಗೌಡ ಅವರನ್ನೂ ಜೆಡಿಎಸ್ಗೆ ಸೇರಿಸಲು ಅಂಬಿ ಪ್ರಯತ್ನಿಸಿದ್ದಾರೆ. ಜೆಡಿಎಸ್ಗೆ ಸೇರ್ಪಡೆಯಾಗಿ, ಇಲ್ಲ ಜೆಡಿಎಸ್ಗೆ ಬೆಂಬಲ ಕೊಡಿ ಎಂದು ಅಂಬರೀಷ್ ತಮ್ಮ ಬೆಂಬಲಿಗರೆಲ್ಲರಿಗೂ ರೆಬೆಲ್ ಸ್ಟಾರ್ ಸೂಚಿಸಿದ್ದಾರೆ. ಏ. 28ರ ನಂತರ ತಮ್ಮ ರಾಜಕೀಯ ನಿರ್ಧಾರದ ಬಗ್ಗೆ ಬಹಿರಂಗವಾಗಿಯೇ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ.
Comments