ಕಾನೂರಾಯಣ ಚಲನಚಿತ್ರ ಏ,27 ಕ್ಕೆ ತೆರೆಗೆ
ಕೊರಟಗೆರೆ ಏ. :- ಶ್ರೀ ಕ್ಷೇತ್ರ ಧರ್ಮಸ್ತಳ ಗ್ರಾಮಾಭಿವೃದ್ದಿ ಯೊಜನೆ ಸದಸ್ಯರ ನಿರ್ಮಾಣ ದಲ್ಲಿ ಕಾನೂರಾಯಣ ಚಲನಚಿತ್ರ ಏ.27 ರಂದು ಬಿಡುಗಡೆಯಾಗಲಿದ್ದು ಕೊರಟಗೆರೆ ಶಿವಗಂಗಾ ಚಿತ್ರಮಂದಿರದಲ್ಲಿ ಚಲನ ಚಿತ್ರ ಪ್ರದರ್ಶನಗೊಳ್ಳಲಿದೆ ಎಂದು ಧರ್ಮಸ್ಥಳ ಗ್ರಾಮಾಭಿದ್ಧಿ ಯೋಜನಾಧಿಕಾರಿ ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಕಚೇರಿಯಲ್ಲಿ ಸುದ್ದಿಘೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ 20 ಲಕ್ಷ ಸದಸ್ಯರು ಸೇರಿ ನಿರ್ಮಿಸಿರುವ ಕಾನೂರಾಯಣ ಚಲನಚಿತ್ರದ ನಿರ್ಮಾಣ ಕಾರ್ಯ ಪೂರ್ಣಗೊಂಡಿದು.
ಚಲನಚಿತ್ರವನ್ನು ಧರ್ಮಸ್ಥಳ ಧರ್ಮಾಧಿಕಾರಿಗಳು ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರಾದ ಡಾ .ಡಿ ವೀರೇಂದ್ರ ಹೆಗ್ಡೆಯವರಿಗೆ 50 ನೇ ಪಟ್ಟಾಭಿಷೇಕ ದ ಸವಿನೆನಪಿಗಾಗಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳು ಸೇರಿ ನಿರ್ಮಾಣ ಮಾಡಿದ್ದಾರೆ.
ಟಿ ಎಸ್ ನಾಗಾಭರಣರವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಡಾ ಎಲ್ ಹೆಚ್ ಮಂಜುನಾಥ್ ಹಾಗೂ ಹರೀಶ್ ಹಾಗಲವಾಡಿ ಕಥೆ-ಸಂಭಾಷಣೆ ತಯಾರಿಸಿದ್ದಾರೆ. ಚಿತ್ರಕಥೆ-ಸಹನಿರ್ದೇಶನದಲ್ಲಿ ಪನ್ನಗ ಭರಣರವರು ಕೈಚಳಕ ತೋರಿಸಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶಯಗಳನ್ನು ಒಳಗೊಂಡು ಗ್ರಾಮೀಣ ಪ್ರದೇಶದಲ್ಲಿ ಎದುರಿಸುವ ಸವಾಲುಗಳನ್ನು ಮುಂದಿಟ್ಟುಕೊಂಡು ನಿಮ್ಮ ಮುಂದೆ ಬರುತ್ತಿದೆ. ಕನ್ನಡ ಚಿತ್ರರಂಗದಲ್ಲೆ ಮೊಟ್ಟಮೊದಲ ಬಾರಿಗೆ 20 ¯ಕ್ಷ ಮಂದಿ ಹಣ ಹಾಕಿ ನಿರ್ಮಿಸುತ್ತಿರುವ ಚಿತ್ರ ಇದಾಗಿದ್ದು ದಾಖಲೆ ನಿರ್ಮಿಸಲು ಸಜ್ಜಾಗಿದೆ. ಮುಖ್ಯಭೂಮಿಕೆಯಲ್ಲಿ ರಾಧಾರಮಣ ಖ್ಯಾತಿಯ ಸ್ಕಂದ ಅಶೋಕ್ , ಸೋನು ಗೌಡ , ದೊಡ್ಡಣ್ಣ , ನೀನಾಂಸಂ ಅಶ್ವತ್ , ಕಡ್ಡಿಪುಡಿ ಚಂದ್ರು ನಟಿಸಿದ್ದಾರೆ. ಎಲ್ಲರೂ ಚಲ ಚಿತ್ರವನ್ನು ಚಿತ್ರಮಂದಿರಕ್ಕೆ ಬಂದು ನೋಡಿ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದ್ದಾರೆ
Comments