ಕಾರ್ಯರ್ತರೇ ಪಕ್ಷದ ಬೆನ್ನುಲು: ಮುರುಳೀಧರ್ ಹಾಲಪ್ಪ




ಕೊರಟಗೆರೆ ಏ. :- ಪಕ್ಷಕ್ಕೆ ಕಾರ್ಯಕರ್ತರೇ ಬೆನ್ನೆಲುಬು ಯಾವುದೇ ಗೊಂದಗಳಿಲ್ಲದೇ ಎಲ್ಲರೂ ಒಟ್ಟಾಗಿ ಪಕ್ಷದ ಸಿದ್ದಾಂತಗಳಿಗೆ ಬದ್ದರಾಗಿರೋಣ ಎಂದು ರಾಜ್ಯ ಕೌಶಲ್ಯಾಭಿವೃದ್ಧಿ ನಿಮಗದ ಅಧ್ಯಕ್ಷ ಮುರುಳೀಧರ್ ಹಾಲಪ್ಪ ತಿಳಿಸಿದರು.
ತಾಲೂಕಿನ ಬ್ಲಾಕ್ ಕಾಂಗ್ರೇಸ್ ಕಚೇರಿಯಲ್ಲಿ ಗುರುವಾರ ನೂತನವಾಗಿ ರಾಜ್ಯ ಒಬಿಸಿ ಕಾರ್ಯರ್ಶಿಯಾದ ಮಹೇಶ್ ಚೌದರಿ, ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷ ಹುಲೀಕುಂಟೆ ಮಲ್ಲಿಕಾರ್ಜುನ್, ಕಾರ್ಯದರ್ಶಿ ಮಯೂರ ಗೋವಿಂದರಾಜು ರನ್ನು ಅಭಿನಂಧಿಸಿ ಮಾತನಾಡಿದರು.
ಎಲ್ಲಾ ಸಮಯದಲ್ಲೂ ದೊಡ್ಡ ನಾಯಕರನ್ನು ಕಾಯದೇ ನಮಗೆ ವಹಿಸಿರುವಂತಹ ಕೆಲಸವನ್ನು ನಾಯಕರ ಪರವಾಗಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಮಾಡಬೇಕು ಎಂದು ಸಲಹೆ ನೀಡಿದರು.
ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೇಸ್ ರಾಜ್ಯ ಒಬಿಸಿ ಕಾರ್ಯದರ್ಶಿ ಮಹೇಶ್ ಚೌದರಿ ಮಾತನಾಡಿ ಪಕ್ಷ ನಮ್ಮನ್ನು ಆಯ್ಕೆ ಮಾಡಿದ್ದು ಪಕ್ಷಕ್ಕೆ ನಾವು ಬದ್ದರಾಗಿ ಈ ಬಾರಿ ಕೊರಟಗೆರೆ ಕ್ಷೇತ್ರದಿಂದ ಡಾ. ಜಿ ಪರಮೇಶ್ವರ್ ಆಯ್ಕೆಗೆ ಸಂಘಟನೆ ಮಾಡುತ್ತೇವೆ ಮತ್ತೆ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಅಧಿಕಾರಕ್ಕೆ ಬರದಲಿದೆ ಎಂದರು.
ಮುಖಂಡರಾದ ಕರವೇ ನಟರಾಜು, ದಿಲೀಪ್,ಹನುಮಂತರಾಯಪ್ಪ, ಸೇರಿದಂತೆ ಇತರರು ಇದ್ದರು.
Comments