ಗ್ರಾಮಗಳ ಅಭಿವೃದ್ಧಿಗೆ ನಾನು ಬದ್ಧ: ಡಾ. ಜಿ ಪರಮೇಶ್ವರ್
ಕೊರಟಗೆರೆ ಏ.26:- ಕ್ಷೇತ್ರದಲ್ಲಿರುವ ಪ್ರತಿಯೊಂದು ಗ್ರಾಮಗಳನ್ನು ಅಭಿವೃದ್ಧಿಗೆ ನಾನು ಬದ್ದ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ತಿಳಿಸಿದರು. ತಾಲೂಕಿನ ಡಿ. ನಾಗೇನಹಳ್ಳಿ ಗ್ರಾಮದಲ್ಲಿನ ಮಾರಮ್ಮ ದೇವಿ ದೇವಾಲಯದಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು.
ಕ್ಷೇತ್ರದಲ್ಲಿನ ಬಹುತೇಕ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿದ್ದು ಸರ್ವತೋಮುಕ ಅಭಿವೃದ್ಧಿಗೆ ನಾನು ನಿಮ್ಮೊಟ್ಟಿಗೇ ಇರುತ್ತೇನೆ ಕ್ಷೇತ್ರದಲ್ಲೇ ಮನೆ ಮಾಡುತ್ತೇನೆ ನನ್ನನ್ನು ನೋಡಲು ನೀವು ಬೆಂಗಳೂರಿಗೆ ಬರುವ ಅವಶ್ಯಕತೆಯಿಲ್ಲ… ನಿಮ್ಮಲ್ಲರ ಕಷ್ಟದಲ್ಲಿ ನಾನು ಇರುತ್ತೇನೆ, ನನ್ನ ವಿರೋಧಿಗಳಿಗೆ ಇದೊಂದು ಆರೋಪ ಮಾಡುವುದನ್ನು ಬಿಟ್ಟರೇ ಬೇರೇನೂ ಗೊತ್ತಿಲ್ಲ ಏಕೆಂದರೆ ನಾನು ಯಾವುದೇ ತಪ್ಪುಕೆಲಸಗಳನ್ನು ಮಾಡಿಲ್ಲ ಅದನ್ನು ಮಾಡುವ ಅವಶ್ಯಕತೆಯೂ ನನಗಿಲ್ಲ… ಜನಸೇವೆಗಾಗಿಯೇ ರಾಜಕಾರಣದಲ್ಲಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದಲ್ಲಿನ ಚರಂಡಿ, ಸಿಸಿ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇತರು ಮೂಲಭೂತ ಸೌಕರ್ಯಗಳ ಬಗ್ಗೆ ಪರಮೇಶ್ವರ್ ಗೆ ಗ್ರಾಮಸ್ಥರು ತೋರಿಸಿದರು. ಸುವರ್ಣ ಗ್ರಾಮದಡಿ ಗ್ರಾಮವನ್ನು ಸರ್ವತೋಮುಖ ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು.
ತಾ.ಪಂ ಅಧ್ಯಕ್ಷ ಕೆಂಪರಾಮಯ್ಯ, ತಾಲೂಕು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ರಾಮಚಂದ್ರಪ್ಪ, ಅಗ್ನಿವಂಶ ಕ್ಷತ್ರೀಯ ಸಂಘದ ತಾಲೂಕು ಅಧ್ಯಕ್ಷ ಸರ್ವೇಶ್ ಎನ್.ಹೆಚ್. ಮಾಜಿ ಗ್ರಾ.ಪಂ ಸದಸ್ಯ ಬಾಬ್ ಜಾನ್ ಸಾಬ್,ಚಂದ್ರಣ್ಣ, ಮುಖಂಡರಾದ ಪಾಪಣ್ಣ, ಕರಿಯಣ್ಣ ಸೇರಿದಂತೆ ಇತರರು ಇದ್ದರು. (ಚಿತ್ರ ಇದೆ)
Comments