ದೋಸ್ತು ಅಂತ ಮಾತಾಡ್ಸಿದ್ಕೆ, ಸಿದ್ಧರಾಮಯ್ಯನಿಗೆ ಸರಿಯಾಗೆ ಟಾಂಗ್ ಕೊಟ್ಟ ಜೆಡಿಎಸ್ ನಾಯಕ
ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ಸ್ವಾರಸ್ಯಕರ ಘಟನೆಯೊಂದು ನಡೆದಿದೆ. ಹಿಂದೆ ಸಿಎಂ ಗೆ ಪರಿಚಿತರಾಗಿದ್ದ ಹಳೆಕೆಸರೆ ಗ್ರಾಮದ ಮರಿಸ್ವಾಮಿ ಜೆಡಿಎಸ್ ಪಕ್ಷದಲ್ಲಿದ್ದಾರೆ. ಸಿದ್ಧರಾಮಯ್ಯ ಪ್ರಚಾರ ನಡೆಸುವ ಸಂದರ್ಭದಲ್ಲಿ ಮರಿಸ್ವಾಮಿ ಅವರನ್ನು ಕಂಡು, ನೀನು ಮೊದಲು ನನ್ನ ಜೊತೆ ಇದ್ದೆಯಲ್ಲ, ಬಾ ಎಂದು ಕರೆದಿದ್ದಾರೆ. ಆದರೆ, ನಾನು ಜೆಡಿಎಸ್ ನಲ್ಲಿದ್ದೇನೆ ಬರಲ್ಲ ಎಂದು ಮರಿಸ್ವಾಮಿ ಹೇಳಿದ್ದಾರೆ.
ಆಗ ಸಿ.ಎಂ. ಸರಿ ನೀನು ಬರಬೇಡ, ವೋಟು ಹಾಕು ಎಂದು ಹೇಳಿದ್ದು, ಇದಕ್ಕೆ ನಿರಾಕರಿಸಿದ ಮರಿಸ್ವಾಮಿ, ನಾನು ಜೆಡಿಎಸ್ ಗೆ ವೋಟು ಹಾಕ್ತೀನಿ ಎಂದು ಅಲ್ಲೇ ಹೇಳಿದ್ದಾರೆ. ಹೀಗೆ ಮುಖ್ಯಮಂತ್ರಿಯವರೇ ಕರೆದ್ರೂ ಹೋಗದ ಮರಿಸ್ವಾಮಿ ಅವರ ಬಗ್ಗೆ ತಿಳಿದ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂತಹ ನಿಷ್ಠಾವಂತ ಕಾರ್ಯಕರ್ತರಿಂದಲೇ ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂದು ಮೈಸೂರಿನಲ್ಲಿ ನಡೆದ ಜೆಡಿಎಸ್.-ಬಿಎಸ್ಪಿ. ಸಮಾವೇಶದಲ್ಲಿ ಅವರು ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಪಕ್ಷಕ್ಕೆ ಬರುವಂತೆ ಕರೆದಾಗ ತಿರುಗೇಟು ನೀಡಿದ್ದ ಹಳೆಕೆಸರೆ ಗ್ರಾಮದ ಗ್ರಾ.ಪಂ.ಸದಸ್ಯ ಮರಿಸ್ವಾಮಿಗೆ ಮಾಜಿ ಸಿಎಂ ಕುಮಾರಸ್ವಾಮಿ ಸನ್ಮಾನ ಮಾಡಿದ್ದಾರೆ. ಕುಮಾರಸ್ವಾಮಿ ಯವರು ತಾವು ತಂಗಿದ್ದ ಖಾಸಗಿ ರೆಸಾರ್ಟ್ಗೆ ಮರಿಸ್ವಾಮಿಯನ್ನು ಕರೆಸಿಕೊಂಡು ಸನ್ಮಾನ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ಮರಿಸ್ವಾಮಿಯಂತಹ ನಿಷ್ಠಾವಂತ ಕಾರ್ಯಕರ್ತರಿಂದ ಜೆಡಿಎಸ್ ಕಾರ್ಯಕರ್ತರಿಗೆ ಆತ್ಮಬಲ ಬಂದಿದೆ ಎಂದು ಹೇಳಿದರು.
Comments