ಡಾ. ಪರಮೇಶ್ವರ್ ಗೆ ಸ್ಪರ್ಧಿಯಾಗಿ ಡಾ. . ಎ.ಸಿ ನಂದಿನಿ ಪಕ್ಷೇತರರಾಗಿ ಸ್ಪರ್ಧೆ



ಕೊರಟಗೆರೆ :- ಕೆಪಿಸಿಸಿ ಡಾ. ಜಿ ಪರಮೇಶ್ವರ್ ಸ್ಪರ್ಧೆಯಿಂದ ರಾಜ್ಯದ ಗಮನ ಸೆಳೆದಿರುವ ಕ್ಷೇತ್ರದಲ್ಲಿ ಡಾ. ಪರಂ ಎದರು ಮತೋರ್ವ ಡಾಕ್ಟರ್ ಅಭ್ಯರ್ಥಿ ಡಾ. ಎ.ಸಿ ನಂದಿನಿ ಪಕ್ಷೇತರರಾಗಿ ಸ್ಪರ್ಧಿಸಿದ್ದು ಎಲ್ಲರ ಗಮನವನ್ನು ಸೆಳೆದಿದ್ದಾರೆ.
ವೃತ್ತಿಯಲ್ಲಿ ವೈದ್ಯೆಯಾಗಿರುವ ನಂದಿನ ಸ್ಥಳೀಯ ಅಭ್ಯರ್ಥಿಯಾಗಿದ್ದು ಬೈಚೇನಹಳ್ಳಿ ಗ್ರಾಮದವರಾಗಿರುವದರಿಂದ ಹೆಚ್ಚು ಗಮನ ಸೆಳೆದಿದ್ದು ಚುನಾವಣ ಪ್ರಚಾರಕ್ಕೆ ಅಣಿಯಾಗಿದ್ದು ಕೊರಟಗೆರೆ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಏಕೈಕ ಮಹಿಳಾ ಅಭ್ಯರ್ಥಿಯಾಗಿದ್ದಾರೆ.
ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ಎನ್ನುತ್ತಿದ್ದರೂ ಕ್ಷೇತ್ರದಿಂದ ಇಬ್ಬರು ಮಹಿಳಾ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಆದರೆ ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಯಾಗಿ ನಂದಿನಿ ಇದ್ದಾರೆ.
ಒಟ್ಟಾರೆ ರಾಜ್ಯದ ಗಮನ ಸೆಳೆದಿರುವಂತಹ ಕ್ಷೇತ್ರದಲ್ಲಿ ಒರ್ವ ಮಹಿಳೆಯಾಗಿ ಕೆಪಿಸಿಸಿ ಅಧ್ಯಕ್ಷರ ಎದುರು ಸ್ಪರ್ಧಿಸಿರುವುದು ವಿಶೇಷವಾಗಿದೆ.
ಉಳಿದಂತೆ ಜೆಡಿಎಸ್ ನ ಹಾಲಿ ಶಾಶಕ ಪಿ.ಆರ್ ಸುಧಾಕರ್ ಲಾಲ್ ಬಿಜೆಪಿಯ ವೈ.ಹೆಚ್ ಹುಚ್ಚಯ್ಯ, ಎಂಇಪಿ ಯಿಂದ ಸತ್ಯಪ್ಪ, ಪಕ್ಷೇತರ ಅಭ್ಯರ್ಥಿಗಳಾಗಿ ಶ್ರೀನಿವಾಸ್ ಕಲ್ಕರೆ, ಎನ್. ಎಸ್ ಗಂಗಯ್ಯ, ಮುತ್ತರಾಜು, ಜೆಟ್ಟಿಅಗ್ರಹಾರ ನಾಗರಾಜು, ಶಾಂತಕುಮಾರ್, ವೆಂಕಟೇಶ್ ಅಂತಿಮ ಕಣದಲ್ಲಿದ್ದಾರೆ.
ಡಾ. ಜಿ ಪರಮೇಶ್ವರ್, ವೈ.ಹೆಚ್ ಹುಚ್ಚಯ್ಯ, ಪಿ.ಆರ್ ಸುಧಾಕರ್ ಲಾಲ್ ತಮ್ಮ ಪಕ್ಷದ ಗುರುತಿನೊಂದಿ ಪ್ರಚಾರ ಮಾಡುತ್ತಿದ್ದು ಪಕ್ಷೇತರರು ತಮ್ಮ ಆಯ್ಕೆಯ ಗುರುತನ್ನು ಆಯ್ಕೆ ಮಾಡಲು ಚುನಾವಣಾಧಿರಿಗಳಾಗಿ ಕಾಯುತ್ತಿದ್ದಾರೆ.
Comments