ಪ.ಪಂ ಅಧಿಕಾರಿಗಳ ನಿರ್ಲಕ್ಷ: ಪ.ಪಂ ಸದಸ್ಯ ನಯಾಜ್ ನೇತೃತ್ವದಲ್ಲಿ ಪ್ರತಿಭಟನೆ- ಕುಡಿಯುವ ನೀರಿಗಾಗಿ ಒತ್ತಾಯ

26 Apr 2018 8:58 AM |
564 Report

ಕೊರಟಗೆರೆ ಏ.  :-  ಪಟ್ಟಣದ ಹಲವು 4 ಮತ್ತು 5 ನೇ ವಾರ್ಡ್ ಗೆ  ಕುಡಿಯುವ ನೀರು  ,ಚರಂಡಿ, ಬೀದಿ ದೀಪ ಸೇರಿದಂತೆ ಇತರೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಲ್ಲ ಎಂದು ಪ.ಪಂ ಸದಸ್ಯ ನಯಾಜ್ ಅಹಮದ್ ನೊಂದಿಗೆ ವಾರ್ಡನ  ಜನರು ತಹಶೀಲ್ದಾರ್ ಗಿರೀಶ್ ಗೆ ಬುಧವಾರ ಮನವಿಯನ್ನು ಸಲ್ಲಿಸಿದರು.

       ಮುಖ್ಯಾಧಿಕಾರಿ ಶ್ರೀನಿವಾಸ್ ಪಟ್ಟಣದಲ್ಲಿನ ಸಮಸ್ಯೆಗಳಿಗೆ ಸ್ಪಂಧಿಸುತ್ತಿಲ್ಲ  ಕಳೆದ 13 ದಿನಗಳಿಂದಲೂ ಕುಡಿಯಲು ನೀರಿಲ್ಲದೇ ಜನರು ಪರಿತಪಿಸುತ್ತಿದ್ದಾರೆ ವಾರ್ಡನಲ್ಲಿರುವಂತಹ ಹಲವು ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾಕ್ಕಾಗಿ ಹಲವು ಬಾರಿ ಮನವಿಯನ್ನು ಸಲ್ಲಿಸಿದ್ದರೂ ಸಹ ನೆಪಮಾತ್ರಕ್ಕೆ ಸ್ಥಳ ಪರಿಶೀಲಿಸಿ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಪ.ಪಂ ಸದಸ್ಯ ನಯಾಜ್ ಅಹಮದ್ ಆರೋಪಿಸಿದರು.

       ಹರಿಜನ ಕಾಲೋನಿ, ಕಾಳಿದಾಸ ಬಡಾವಣೆ, ಗೊಂದಿಹಳ್ಳಿ ರಸ್ತೆ, ಹನುಂತಪುರ, ಗಿರಿನಗರ, ಕಾವಲ ಬೀಳು  ಪ್ರದೇಶಗಳ ವಾಸಿಗಳು ತಹಶೀಲ್ದಾರ್ ಗೆ ಮನವಿಯನ್ನು ಸಲ್ಲಿಸಿದರು.

       ಈ ಸಂದರ್ಭದಲ್ಲಿ ವಾರ್ಡವಾಸಿಗಳಾದ ದಾದಾಪೀರ್, ಮಹಮದ್ ಫಾರೂಕ್, ಸುಮ್ಮಯಾ, ಇಸ್ಮಾಯಿಲ್, ಇಮಾಭಿ, ಹರ್ ಸಿಯಾ ಬಾನು ಸೇರದಂತೆ ಇತರರು ಇದ್ದರು. (ಚಿತ್ರ ಇದೆ)

 

Edited By

Raghavendra D.M

Reported By

Raghavendra D.M

Comments