ಕಾಂಗ್ರೆಸ್ ನ ಪ್ರಭಾವಿ ಅಭ್ಯರ್ಥಿ ಜೆಡಿಎಸ್ ಗೆ ಸೇರ್ಪಡೆ...!!
ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯದ ಕಾವು ಹೆಚ್ಚುತ್ತಿದೆ. ಅಲ್ಲದೆ ಪಕ್ಷಾಂತರ ಪರ್ವ ಹೆಚ್ಚಾಗುತ್ತಿದೆ. ಅನ್ಯ ಪಕ್ಷದ ಮುಖಂಡರು ಜೆಡಿಎಸ್ ನತ್ತ ವಲಸೆ ಬರುತ್ತಿದ್ದಾರೆ. ಮಾತೃ ಪಕ್ಷ ಜೆಡಿಎಸ್ ಗೆ ಕಲ್ಪನ ಸಿದ್ದರಾಜು ಇಂದು ಮರಳಿದ್ದಾರೆ. ಕಲ್ಪನ ಸಿದ್ದರಾಜು ಮನೆಗೆ ಹೋದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮತ್ತೆ ತಮ್ಮ ಪಕ್ಷಕ್ಕೆ ಮಾಜಿ ಶಾಸಕಿ ಕಲ್ಪನ ಸಿದ್ದರಾಜು ಅವರನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ದಿ. ಸಿದ್ದರಾಜು ಸಮಾಧಿ ಪೂಜೆ ಸಲ್ಲಿಸಿದ ಎಚ್.ಡಿ. ಕುಮಾರಸ್ವಾಮಿ ಅವರು, ಕಲ್ಪನ ಸಿದ್ದರಾಜು ಮರಳಿ ಮನೆಗೆ ಬರುತ್ತಿರುವುದು ಜೆಡಿಎಸ್ ಗೆ ಈ ಭಾಗದಲ್ಲಿ ಆನೆ ಬಲ ತಂದಿದೆ ಎಂದಿದ್ದಾರೆ . ಇನ್ನು ಈ ಸಂದರ್ಭದಲ್ಲಿ ನೆರೆದಿದ್ದ ಜೆಡಿಎಸ್ ಕಾರ್ಯಕರ್ತರು ಕುಮಾರಸ್ವಾಮಿ ಮತ್ತು ಸಿದ್ದರಾಜುಗೆ ಜೈ ಘೋಷ ಮೊಳಗಿಸಿದರು. ಇನ್ನು ಮಾತೃ ಪಕ್ಷ ಜೆಡಿಎಸ್ ಗೆ ಕಲ್ಪನ ಸಿದ್ದರಾಜು ಪುನರ್ ಆಗಮಿಸುವ ನಡೆಗೆ ಕಲ್ಪನ ಸಿದ್ರಾಜು ಬೆಂಬಲಿಗರು ಸಂಭ್ರಮಿಸಿದರು.
Comments