ಮುತ್ತುರಾಜನ ನೆನಪಲ್ಲಿ ದೊಡ್ಡಬಳ್ಳಾಪುರ ಅಭಿಮಾನಿ ದೇವರುಗಳು
ನಗರದ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವರನಟ ರಾಜ್ ರ 89ನೇ ಜಯಂತಿಯನ್ನು ಆಚರಿಸಲಾಯಿತು, ತಾಲ್ಲೂಕು ರಾಜ್ ಅಭಿಮಾನಿ ಸಂಘ, ತೇರಿನಬೀದಿ ನವ ಜಾಗೃತಿ ರಾಜ್ ಅಭಿಮಾನಿಗಳ ಸಂಘ, ಸಿನಿಮಾ ರಸ್ತೆಯ ಕರ್ನಾಟಕ ರತ್ನ ರಾಜಕುಮಾರ್ ಅಭಿಮಾನಿ ಸಂಘ, ದರ್ಗಾ ಜೋಗಳ್ಳಿಯ ರೈತ ರಾಜಕುಮಾರ್ ಅಭಿಮಾನಿ ಸಂಘ, ಆರೂಡಿಯ ರಾಜ್ ಅಭಿಮಾನಿ ಸಂಘ, ಕಲ್ಲುಪೇಟೆ ರಾಜ್ ಅಭಿಮಾನಿಗಳು, ಸೇರಿದಂತೆ ವಿವಿಧ ಕಡೆಗಳಲ್ಲಿ ಜನ್ಮದಿನವನ್ನು ಆಚರಿಸಿದರು. ಇವರೊಂದಿಗೆ ರೈಲ್ವೆ ಸ್ಟೇಷನ್ ಬಳಿ ಇರುವ ಗಂಗಾ ಭಗತ್ ಸಿಂಗ್ ಚಂದ್ರಶೇಖರ ಆಜಾದ್ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಎರ್ಪಡಿಸಿ ಜಯಂತಿಯನ್ನು ವಿಶೇಷವಾಗಿ ಆಚರಣೆ ಮಾಡಲಾಯಿತು. ಜನ್ಮದಿನದ ಅಂಗವಾಗಿ ನೆಲದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಅಭಿಷೇಕ ಮಾಡಿಸಿ ರಾಜ್ ಪ್ರತಿಮೆಗೆ ಮಾಲಾರ್ಪಣೆ, ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು,ಹಣ್ಣು ಹಂಚಿಕೆ, ಕಲ್ಲುಪೇಟೆಯಲ್ಲಿ ಅನ್ನದಾನ ಸೇವೆ ನಡೆಯಿತು. ನಗರದ ಹಲವಾರು ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.
Comments