ಕೊರಟಗೆರೆ ಮೀಸಲು ಕ್ಷೇತ್ರಕ್ಕೆ ಕೊನೇ ದಿನ 9 ಜನ ನಾಮಪತ್ರ ಸಲ್ಲಿಕೆ
ಕೊರಟಗೆರೆ ಏ. 24:- ಕೊರಟಗೆರೆ ಮೀಸಲು ವಿಧಾನ ಸಭಾ ಕ್ಷೇತ್ರಕ್ಕೆ ಒಟ್ಟು 13 ಜನ ಉಮೇದುಗಾರಿಕೆ ಸಲ್ಲಿಸಿದ್ದಾರೆ. ಕೊನೆಯ ದಿನವಾದ ಮಂಗಳವಾರ ಒಟ್ಟು 9 ಜನ ನಾಮಪತ್ರವನ್ನು ಸಲ್ಲಿಸಿದ್ದು ವಿಶೇಷ
ಬಿಜೆಪಿಯ ವೈ.ಹೆಚ್ ಹುಚ್ಚಯ್ಯ, ಎಂಇಪಿ ಯಿಂದ ಸತ್ಯಪ್ಪ, ಸಮಾನ ಜನತಾ ಪಾರ್ಟಿ(ಎಸ್ ಜೆಪಿ) ಯಿಂದ ಎನ್.ಎಸ್ ಲಕ್ಷ್ಮಿನಾರಾಯಣ್, ಬಿಜೆಪಿ ಬಂಡಾಯವಾಗಿ ಎಂ. ಆರತಿ, ಪಕ್ಷೇತರ ಅಭ್ಯರ್ಥಿಗಳಾಗಿ ಶ್ರೀನಿವಾಸ್ ಕಲ್ಕರೆ, ಎನ್. ಎಸ್ ಗಂಗಯ್ಯ, ಮುತ್ತರಾಜು, ಶಾಂತಕುಮಾರ್, ವೆಂಕಟೇಶ್ ಅರ್ಜಿ ಸಲ್ಲಿಸಿದ್ದಾರೆ.
ಡಾ. ಜಿ ಪರಮೇಶ್ವರ್, ವೈ.ಹೆಚ್ ಹುಚ್ಚಯ್ಯ, ಪಿ.ಆರ್ ಸುಧಾಕರ್ ಲಾಲ್, ಮತ್ತು ಎನ್.ಎಸ್ ಗಂಗಯ್ಯ ಎರಡೆರಡು ನಾಮಪತ್ರವನ್ನು ಸಲ್ಲಿಸಿದ್ದಾರೆ.
ಒಟ್ಟಾರೆ ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ಸ್ಪರ್ಧೆಯಿಂದ ರಂಗೇರಿರುವ ಕ್ಷೇತ್ರದಲ್ಲಿ ಹೆಚ್ಚು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಾರೆ ಎನ್ನುವ ಗಾಳಿ ಮಾತುಗಳು ಕೇಳಿಬಂದಿದ್ದವಾದರೂ ಕೇವಲ 13 ಜನ ಅಭ್ಯರ್ಥಿಗಳಷ್ಟೇ ನಾಮಪತ್ರ ಸಲ್ಲಿಸಿದ್ದಾರಷ್ಟೇ.
ಚಿತ್ರ :- ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಎಂ. ಆರತಿ ಮಂಗಳವಾರ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.
Comments