ಬಿಜೆಪಿ ಅಭ್ಯರ್ಥಿ ಜೆ.ನರಸಿಂಹಸ್ವಾಮಿ ಕುಟುಂಬದ ಆಸ್ತಿ 9.25 ಕೋಟಿ ರೂ. ಘೋಷಣೆ




ಪತ್ನಿ ನವ್ಯಾ, ಪುತ್ರ ಎನ್. ಅರವಿಂದ್ ಹಾಗೂ ಸೊಸೆ ಶ್ವೇತಾರ ವಿವರಗಳನ್ನು ನಮೂದಿಸಿದ್ದಾರೆ, ನರಸಿಂಹಸ್ವಾಮಿ ಬಳಿ 90 ಸಾವಿರ ನಗದು, ಕುಟುಂಬ ಸದಸ್ಯರ ಬಳಿ 2.75 ಲಕ್ಷ ರೂ. ನಗದು ಇದೆ. ವಿವಿಧ ಬ್ಯಾಂಕ್ ಗಳಲ್ಲಿ ಠೇವಣಿ, ಉಳಿತಾಯ ಖಾತೆಯಲ್ಲಿರುವ ಹಣ 1.45 ಲಕ್ಷ ರೂ. ಸದಸ್ಯರ ಹೆಸರಿನಲ್ಲಿ 3.56 ಲಕ್ಷ ಠೇವಣಿ ಇದೆ. ಬೆಂಜ್, ಇನ್ನೋವಾ ಕಾರುಗಳು ಇದೆ, ಪುತ್ರನ ಹೆಸರಿನಲ್ಲಿ ಮಹೀಂದ್ರ ಸ್ಕಾರ್ಪಿಯೋ, 2 ಕೆ.ಜಿ ಚಿನ್ನ, 10 ಕೆ.ಜಿ ಬೆಳ್ಳಿ, ಕುಟುಂಬದವರ ಬಳಿ 1.23 ಕೋಟಿ ಚಿನ್ನ ಹಾಗೂ ಬೆಳ್ಳಿ ವಸ್ತುಗಳು ಇದೆ. ತಾಲ್ಲೂಕಿನ ಮಾಸ್ತಿಮ್ಮ ಹಳ್ಳಿಯಲ್ಲಿ 14.23 ಎಕರೆ ಕೃಷಿ ಭೂಮಿ ನರಸಿಂಹಸ್ವಾಮಿ ಹೆಸರಲ್ಲಿದೆ, ಸ್ಥಿರಾಸ್ತಿ ಮೌಲ್ಯ 2.5 ಕೋಟಿ ರೂ. ತೂಬಗೆರೆಯಲ್ಲಿ ಮಗನ ಹೆಸರಲ್ಲಿ 1.25 ಕೋಟಿ ರೂ. 9.03 ಎಕರೆ ಕೃಷಿ ಭೂಮಿ, ಅಭ್ಯರ್ಥಿ ಹೆಸರಲ್ಲಿ 2.63 ಕೋಟಿ ಹಾಗೂ ಮಗನ ಹೆಸರಲ್ಲಿ 4 ಕೋಟಿ ಸಾಲ ಇದೆ.
Comments