30 ಕೋಟಿ ಆಸ್ತಿ ಘೋಷಿಸಿಕೊಂಡ ಜೆಡಿಎಸ್ ಅಭ್ಯರ್ಥಿ ಮುನೇಗೌಡರು
ನಾಮಪತ್ರ ಸಲ್ಲಿಸುವ ವೇಳೆ ನೀಡಿರುವ ಆಸ್ತಿ ವಿವರದಲ್ಲಿ ಪತ್ನಿ ಪದ್ಮಾವತಿ, ಮಕ್ಕಳಾದ ಆಕಾಂಕ್ಷ ಎಂ.ಗೌಡ, ಅಂಜನಗೌಡರ ಆಸ್ತಿ ವಿವರ ನೀಡಿ 30 ಕೋಟಿ ರೂ. ಎಂದು ಘೋಷಿಸಿ ಕೊಂಡಿದ್ದಾರೆ, ಕೈಯ್ಯಲ್ಲಿರುವ ನಗದು 15 ಲಕ್ಷ ರೂ. ಹಾಗೂ ಕುಟುಂಬದವರ ಬಳಿ 1 ಲಕ್ಷ, ವಿವಿಧ ಬ್ಯಾಂಕ್ ಗಳಲ್ಲಿ ಠೇವಣಿ ಹಾಗೂ ಉಳಿತಾಯ ಖಾತೆಗಳಲ್ಲಿ 2 ಲಕ್ಷ ಇದೆ, ಮುನೇಗೌಡರ ಹೆಸರಿನಲ್ಲಿ 23 ಲಕ್ಷ ಸಾಲ, ಕಾರ್ಖಾನೆಗಾಗಿ 10.5 ಲಕ್ಷ, 1 ಲಕ್ಷ ಕೃಷಿ ಸಾಲ ಇರುವುದಾಗಿ ನಮೂದಿಸಿದ್ದಾರೆ, 15 ಲಕ್ಷ ಮೌಲ್ಯದ ಇನ್ನೋವಾ ಕಾರು, 2 ಲಕ್ಷದ ಸ್ಕಾರ್ಪಿಯೋ ಕಾರು, ಕಾರ್ಖಾನಿಗಾಗಿ ಬಳಸುವ ಲಾರಿಗಳು, ಟಾಟಾ ಸುಮೋ,ಜೆಸಿಬಿ ಸೇರಿ ಒಟ್ಟು 48 ಲಕ್ಷ ರೂ. ವಾಹನಗಳಿವೆ. 30 ಗ್ರಾಂ ಚಿನ್ನ, 2 ಲಕ್ಷ ರೂ. ಬೆಳ್ಳಿ, ಕುಟುಂಬದವರ ಹೆಸರಲ್ಲಿ 7 ಲಕ್ಷ ರೂ. ಚಿನ್ನ ಇದೆ. ವಿವಿಧ ಕಡೆಗಳಲ್ಲಿ 22.3 ಕೋಟಿ ಮೌಲ್ಯದ ಕೃಷಿ ಭೂಮಿ, ಪತ್ನಿ ಹೆಸರಲ್ಲಿ 3.60 ಕೋಟಿ ಮೌಲ್ಯದ ಕೃಷಿ ಭೂಮಿ, 3.73 ಕೋಟಿ ರೂ. ಕೃಷಿಯೇತರ ಭೂಮಿ, 60 ಲಕ್ಷದ ವಾಣಿಜ್ಯ ಕಟ್ಟಡಗಳು ಇದೆ.
Comments