ಕೆಪಿಸಿಸಿ ಸಾರಥಿಯಿಂದ ನಾಮಪತ್ರ ಸಲ್ಲಿಕೆ.. ಅಪಾರ ಬೆಂಬಲಿಗರೊಂದಿಗೆ ಶೋಡ್ ಶೋ…







ಕೊರಟಗೆರೆ ಏ.:- ಕ್ಷೇತ್ರದ ಜನರ ಮೇಲೆ ನಂಬಿಕೆಯಿದೆ ನಾನು ಒಂದೇ ಕ್ಷೇತ್ರದಲ್ಲೇ ನಾಮಪತ್ರ ಸಲ್ಲಸಿದ್ದೇನೆ, ಕೊರಟಗೆರೆ ಮತದಾರರು ನನ್ನ ಗೆಲ್ಲಿಸೋ ವಿಶ್ವಾಸವಿದ್ದು ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ನಿಶ್ಚಿತ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇವರ್ ತಿಳಿಸಿದರು.
ಕೊರಟಗೆರೆ ಪಟ್ಟಣದಲ್ಲಿ ಕಟ್ಟೇ ಗಣಪತಿ ಪೂಜೆ ಸಲ್ಲಿಸಿ ನಂತರ ನಾಮಪತ್ರ ಸಲ್ಲಿಸಿದ ನಂತರ ಜನರನ್ನು ಉದ್ದೇಶಿಸಿ ಮಾತನಾಡಿದರು.
ಕೊರಟಗೆರೆ ಕ್ಷೇತ್ರ ಹೊರತುಪಡಿಸಿ ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸಲು ನನಗೆ ಆಹ್ವಾನ ನೀಡಿದ್ದು ನಿಜ ಆದರೆ ನನಗೆ ಅವಶ್ಯಕತೆ ಇಲ್ಲ… ನಾನು ಕೊರಟಗೆರೆ ಕ್ಷೇತ್ರದ ಜನರ ಮೇಲೆ ವಿಶ್ವಾಸವಿಟ್ಟು ಇಲ್ಲೇ ಸ್ಪರ್ಧಿಸಲು ನಿಶ್ವಯಿಸಿ ನಾಮಪತ್ರ ಸಲ್ಲಿಸಿದ್ದೇನೆ ಎಂದರು.
ಅಂಬರೀಶ್ ಬಿ ಪಾರಂ ಪಡೆಯುವ ವಿಚಾರ:- ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪರಂ ಅಂಬರೀಶ್ ಜೊತೆ ಮಾತನಾಡಿದ್ದೇನೆ ಮಂಗಳವಾರದ ವರೆಗೂ ಸಮಯ ಇದೆ ಅವರು ಬಿ ಪಾರಂ ತೆಗೆದುಕೊಳ್ತಾರೆ ಎನ್ನುವ ವಿಶ್ವಾಸವಿದೆ ಆರೋಗ್ಯದ ದೃಷ್ಟಿಯಿಂದ ಆ ರೀತಿ ಮಾತನಾಡಿರಬಹುದು ನಮ್ಮಲ್ಲಿ ಯಾವುದೇ ಗೊಂದಲವಾಗೋಲ್ಲ ಜಾರ್ಜ್ ಮತ್ತು ಸಿಎಂ ಈಗಾಗಲೇ ಮಾತನಾಡಿದ್ದಾರೆ.
ನಮ್ಮಿಬ್ಬರಿಗೂ ಬಯವಿಲ್ಲ:- ಸಿ.ಎಂ ಸಿದ್ದರಾಮಯ್ಯ ಎರಡು ಕಡೆ ಸ್ಪರ್ಧಿಸುತ್ತಿದ್ದಾರಲ್ಲಾ... ಸೋಲುವ ಭೀತಿಯಿಂದ ಈಗೆ ಮಾಡಿದ್ದಾರೆಯೇ ಎನ್ನುವ ಪ್ರಶ್ನಿಗೆ ಉತ್ತರಿಸಿದ ಪರಂ, ಸಿ.ಎಂ ಮತ್ತು ನನಗೂ ಸೋಲುವ ಬಯವಿಲ್ಲ ಕಾರ್ಯಕರ್ತರ ಒತ್ತಾಯ ಮತ್ತು ಉತ್ತರ ಕರ್ನಾಟಕ ಬಾಗದಲ್ಲಿ ಸಿ.ಎಂ ಸ್ಪರ್ಧೆಯಿಂದ ಹೆಚ್ಚಿನ ಲಾಭವಾಗುತ್ತದೆ ಎನ್ನುವ ಹಿನ್ನೆಲೆಯಲ್ಲಿ ಎರಡು ಕಡೆ ಸ್ಪರ್ಧಿಸುತ್ತಿದ್ದು ಇದರಲ್ಲಿ ಮತ್ತೇನಿಲ್ಲ ಎಂದು ಎರಡು ಕಡೆ ಸ್ಪರ್ಧೆಗೆ ಸ್ಪಷ್ಟೀರಣ ನೀಡಿದರು.
ನಾಮಪತ್ರ ಸಲ್ಲಿಸಿದ ನಂತರ ಸಾವಿರಾರು ಕಾರ್ಯಕರ್ತರೋಂದಿಗೆ ರೋಡ್ ಶೋ ನಲ್ಲಿ ಭಾಗವಹಿಸಿ ಶಕ್ತಿ ಪ್ರದರ್ಶನ ನಡೆಸಿದರು..ಕಳೆದ ಬಾರಿ ಕೊರಟಗೆರೆಯಲ್ಲಿ ಸೋಲು ಕಂಡಿದ್ದ ಪರಮೇಶ್ವರ್ ಈ ಬಾರಿ ತಮ್ಮ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ..
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಅನಿಲ್ ಕುಮಾರ್ ಪಾಟೀಲ್, ಸಂಸದ ಎಸ್.ಪಿ ಮುದ್ದಹನುಮೇಗೌಡ, ತೆಂಗು ಮತ್ತು ನಾರು ಅಧ್ಯಕ್ಷ ವೆಂಕಟಾಲಚಯ್ಯ, ಕೌಶಲ್ಯಾಭಿವೃದ್ಧಿ ನಿಮಗದ ಅಧ್ಯಕ್ಷ ಮುರುಳೀಧರ್ ಹಾಲಪ್ಪ, ಜಿ.ಪಂ ಸದಸ್ಯ ನಾರಾಯಣ ಮೂರ್ತಿ, ಪ.ಪಂ ಮಾಜಿ ಅಧ್ಯಕ್ಷ ಎ.ಡಿ ಬಲರಾಮಯ್ಯ, ರಾಜ್ಯ ಒಬಿಸಿ ಕಾರ್ಯದರ್ಶಿ ಮಹೇಶ್ ಚೌದರಿ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ್, ಮುಖಂಡರಾದ ವಾಲೆ ಚಂದ್ರಯ್ಯ, ಗೊರವನಹಳ್ಳಿ ಮಂಜುನಾಥ್, ರುದ್ರಪ್ರಸಾದ್, ಕೆ.ಎಂ ಸುರೇಶ್ ಸೇರಿದಂತೆ ಇತರರು ಇದ್ದರು. ( ಚಿತ್ರ ಇದೆ)
Comments