ಪರಂ ಅರ್ಥ ಘಂಟೆ ಚುನಾವಣಾ ಅಧಿಕಾರಿಗಳ ಮುಂದೆ ಏನು ಮಾಡ್ತಿದ್ರು...!!!???
ಕೊರಟಗೆರೆ ಏ. 23 ಒಳ್ಳೆ ಮೂರ್ಥ ಬರಬೇಕು ಆಗಲೇ ಚುನಾವರಣಾ ನಾಮಪತ್ರ ಸಲ್ಲಿಸಬೇಕು ಎಂದು ಅರ್ಧ ಗಂಟೆಗೂ ಹೆಚ್ಚಿನ ಸಮಯವನ್ನು ಕೆಪಿಸಿಸಿ ಅಧ್ಯಕ್ಷ ಪರಂ ಕಾದು ನಾಮಪತ್ರ ಸಲ್ಲಿದ್ದಾರೆ.
ಒಳ್ಳೇ ಮೂರ್ತಕ್ಕಾಗಿ ಕಾದ ಪರಂ:-
12 ಕ್ಕೆ ನಾಮ ಪತ್ರ ಸಲ್ಲಿಸುತ್ತಾರೆ ಎಂದು ಹೇಳಿದ್ದ ಪರಂ 12.15 ಕ್ಕೆ ಚುನಾವಣಾ ಅಧಿಕಾರಿಯ ಬಳಿ ಬಂದರೂ ಸಹ 12.45 ರ ನಂತರ ನಾಮ ಪತ್ರವನ್ನು ಸಲ್ಲಿಸಿದರು, ಚುನಾವಣಾಧಿಕಾರಿಯ ಮುಂದೆ ಕೂತು ಪದೇ ಪದೇ ಗಡಿಯಾರ ನೋಡಿಕೊಂಡು, ಸುಮ್ಮನೇ ನಾಮಪತ್ರವನ್ನು ತಿರುಗಿಸುತ್ತಾ ಅರ್ಧ ಗಂಟೆಗೂ ಹೆಚ್ಚಿನ ಕಾಲ ವ್ಯಯ ಮಾಡಿ ಸಂಖ್ಯಾಶಾಸ್ತ್ರಜ್ಞರ ನಿಗದಿಯಂತೆ ನಾಮಪತ್ರ ಸಲ್ಲಿಸಿದ್ದು, ವಿಶೇಷ ಪೂಜೆಯನ್ನು ಮಾಡಿಸಿ ತಂದಿದ್ದ 5 ಸಾವಿರ ಹಣವನ್ನು ಠೇವಣೆ ಹಣವನ್ನಾಗಿ ನೀಡಿ ಗೆಲುವಿಗಾಗಿ ದೇವರ ಮೊರೆ ಹೋಗಿರುವುದನ್ನು ತೋರ್ಪಡಿಸಿದರು. ಈ ಸಂದರ್ಭದಲ್ಲಿ ಅವರೊಟ್ಟಿಗೆ ಸಂಸದ ಎಸ್. ಪಿ ಮುದ್ದಹನುಮೇಗೌಡ ಪದೇ ಪದೇ ವಾಚ್ ತೋಡುತ್ತಾ.. ಇದ್ದರು, ಒಟ್ಟಾರೆ ಮೌಡ್ಯತೆಯನ್ನು ಡಾಕ್ಟರೇಟ್ ಪದವಿ ಪಡೆದವರು ಮಾಡುತ್ತಿದ್ದಾರೆ. ನಮ್ಮಲ್ಲಿ ಆತ್ಮವಿಶ್ವಾಸದ ಕೊರತೆಯಾದ್ರ ಈಗೆಲ್ಲಾ ಮಾಡ್ ಬಿಡ್ತೀವೀ ಅಲ್ವಾ ಎನ್ನುತ್ತಾ ಗುಣುಗುತ್ತಿದ್ರು ಕೆಲವು ಕಾರ್ಯಕರ್ತರು...
Comments