ಜೆಡಿಎಸ್ ಅಭ್ಯರ್ಥಿ ಮುನೇಗೌಡರಿಂದ ನಾಮ ಪತ್ರ ಸಲ್ಲಿಕೆ
ಇಂದು ದೊಡ್ಡಬಳ್ಳಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಶ್ರೀ ಬಿ. ಮುನೇಗೌಡರು ತಮ್ಮ ಪಕ್ಷದ ಸಾವಿರಾರು ಮಂದಿ ಅಭಿಮಾನಿಗಳೊಂದಿಗೆ ಆಗಮಿಸಿ ತಾಲ್ಲೂಕು ಕಛೇರಿಯಲ್ಲಿ ಚುನಾವಣಾಧಿಕಾರಿ ಡಾ.ರಾಜೇಂದ್ರಪ್ರಸಾದ್ ಅವರಿಗೆ ನಾಮಪತ್ರ ಸಲ್ಲಿಸಿದರು. ಬೆಳಿಗ್ಗೆ ನಗರದ ಬಯಲು ಬಸವಣ್ಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆಯ ಮುಖಾಂತರ ತಾಲ್ಲೂಕು ಕಛೇರಿಗೆ ಆಗಮಿಸಿ ನಾಮ ಪತ್ರ ಸಲ್ಲಿಸಿದರು. ಜೆಡಿಎಸ್ ನಗರ ಅಧ್ಯಕ್ಷ ರವಿಕುಮಾರ್, ಜೆಡಿಎಸ್ ನಗರ ಕಾರ್ಯಧ್ಯಕ್ಷ ಪಿ.ಸಿ.ಲಕ್ಷ್ಮೀನಾರಾಯಣ್, ಜೆಡಿಎಸ್ ತಾಲ್ಲೂಕು ಕಾರ್ಯಧ್ಯಕ್ಷ ಕೆಂಪರಾಜು, ನಗರ ಪ್ರಧಾನ ಕಾರ್ಯದರ್ಶಿ ಅಖಿಲೇಶ್, ಮುಖಂಡರಾದ ಸತ್ಯನಾರಾಯಣ್, ನಗರಸಭಾ ಸದಸ್ಯರಾದ ಶಿವಕುಮಾರ್, ಸುಶೀಲಾ ರಾಘವ, ಅನಸೂಯಮ್ಮ ಮತ್ತಿತರರು ಹಾಜರಿದ್ದರು.
Comments