ಬಿಜೆಪಿ ನಾಯಕ ಹಾಗೂ ಮಾಜಿ ಶಾಸಕ ಜೆಡಿಎಸ್ ಗೆ ಸೇರ್ಪಡೆ..!!
ರಾಜ್ಯ ರಾಜಕಾರಣದ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯದ ಕಾವು ಹೆಚ್ಚುತ್ತಿದೆ. ಅಶೋಕ್ ಖೇಣಿ ಸೋದರ ಸಂಬಂಧಿ ಸಂಜಯ್ ಖೇಣಿ, ಇವರೊಂದಿಗೆ 1974-80ರ ಅವಧಿಯಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ನರೇಂದ್ರ ಖೇಣಿ ಮತ್ತು ಪ್ರಕಾಶ್ ಖೇಣಿ ಜೆಡಿಎಸ್ ವರಿಷ್ಠ ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆಯಾದರು.
ಸಂಜಯ್ ಖೇಣಿ ಬೀದರ್ ದಕ್ಷಿಣನಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಟಿಕೆಟ್ ಸಿಗುವುದು ಅನುಮಾನವಾಗಿರುವುದರಿಂದ ಜೆಡಿಎಸ್ ಸೇರಿದ್ದಾರೆ. ಪಕ್ಷದ ಶಾಲು ಹಾಕಿ ಸ್ವಾಗತಿಸಿದ ಜೆಡಿಎಸ್ ವರಿಷ್ಠ ದೇವೇಗೌಡರು, ಖೇಣಿ ಕುಟುಂಬ ಬೀದರ್‌ನಲ್ಲಿ ದೊಡ್ಡ ಕುಟುಂಬ. ಅಕ್ರಮ ಮಾಡಿದ ಅಶೋಖ್ ಖೇಣಿಯನ್ನು ಸೋಲಿಸುತ್ತೇನೆ ಎಂದು ಹೇಳಿದ್ದೆ. ಈಗ ಅವರ ಚಿಕ್ಕಪ್ಪ ನರೇಂದ್ರ ಖೇಣಿ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಈಗ ದೊಡ್ಡ ಶಕ್ತಿ ಬಂದಿದೆ. ಇದೆಲ್ಲವೂ ದೈವದಾಟ ಎಂದು ಮೊದಲೇ ಹೇಳಿದ್ದೇನೆ ಎಂದು ಹೇಳಿದರು. ನಂತರ ಮಾತನಾಡಿದ ನರೇಂದ್ರ ಖೇಣಿ, ಅಶೋಕ್ ಖೇಣಿಯನ್ನು ಸೋಲಿಸಿಯೇ ತೀರುತ್ತೇವೆ. ಅಶೋಕ್ ಖೇಣಿ ಅಮೆರಿಕದಲ್ಲಿದ್ದು ಇತ್ತೀಚೆಗೆ ಇಲ್ಲಿಗೆ ಬಂದಿದ್ದಾನೆ. ಸೋಲಿಸಿ ಮತ್ತೆ ದೇವೇಗೌಡರ ಬಳಿ ಬರುತ್ತೇವೆ. ಐದು ವರ್ಷ ಅಧಿಕಾರದಲ್ಲಿದ್ದು ಯಾವ ಅಭಿವೃದ್ಧಿ ಕೆಲಸ ಮಾಡಿಲ್ಲ. ಬಂಡೆಪ್ಪ ಕಾಶೆಂಪುರ ಅವರನ್ನೇ ನಾವು ಗೆಲ್ಲಿಸುತ್ತೇವೆ ಎಂದು ಅಶೋಕ್ ಖೇಣಿ ವಿರುದ್ಧ ಹರಿಹಾಯ್ದರು.
Comments