ಬಿಜೆಪಿ ಗೆ ಶಾಕ್, ಮತ್ತೊಂದು ವಿಕೆಟ್ ಜೆಡಿಎಸ್ ತೆಕ್ಕೆಗೆ…!!



ವಿಧಾನಸಭಾ ಚುನಾವಣೆ ಹತ್ತಿರ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕೀಯ ರಂಗೇರುತ್ತಿದೆ. ಅಲ್ಲದೆ ಪಕ್ಷಾಂತರ ಪರ್ವ ಹೆಚ್ಚಾಗುತ್ತಿದ್ದು, ಹಲವು ಮುಖಂಡರು ಜೆಡಿಎಸ್ ನತ್ತ ಮುಖ ಮಾಡುತ್ತಿದ್ದಾರೆ. ಬಿಜೆಪಿ ಟಿಕೆಟ್ ಸಿಗದಿದ್ದರಿಂದ ಅಸಮಾಧಾನಗೊಂಡಿದ್ದ ಮಾಜಿ ಸಚಿವ ರೇವೂ ನಾಯಕ್ ಬೆಳಮಗಿ ಭಾನುವಾರ ಜೆಡಿಎಸ್ ಗೆ ಸೇರ್ಪಡೆಗೊಂಡರು.
ಪದ್ಮನಾಭನಗರದಲ್ಲಿ ಮಾಜಿ ಎಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಮಾಜಿ ಸಚಿವ ರೇವು ನಾಯಕ್ ಬೆಳಮಗಿ ಜೆಡಿಎಸ್ ಸೇರ್ಪಡೆಗೊಂಡರು. ಕಲ್ಬರ್ಗಿ ಗ್ರಾಮಾಂತರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿತಾಗಿ ಸ್ಪರ್ಧೆ ಮಾಡಲಿದ್ದಾರೆ. ಸೇರ್ಪಡೆ ಮಾಡಿಕೊಂಡ ಮಾಜಿ ಪ್ರಧಾನಿ ಹೇಳಿಕೆ ರೇವುನಾಯಕ್ ಬೆಳಮಗಿ ಅವರು ಜೆಡಿಎಸ್ ಸೇರ್ಪಡೆ ಆಗಿರುವುದರಿಂದ ಪಕ್ಷಕ್ಕೆ ಹೆಚ್ಚಿನ ಬಲಬಂದಿದೆ. ಅವರು ಕಲ್ಬರ್ಗಿ ಗ್ರಾಮಾಂತರ ಕ್ಷೇತ್ರದಿಂದ ದಿಂದ ಸ್ಪರ್ಧೆ ಮಾಡಲಿದ್ದಾರೆ.
ಇದೇ ವೇಳೆ ಬಿಎಸ್‌ವೈ ವಿರುದ್ಧ ವಾಗ್ದಾಳಿ ನಡೆಸಿದ ಬೆಳಮಗಿ, ಬಂಜಾರ ಸಮುದಾಯದ ತಾಕತ್ತು ಎಷ್ಟು ಅನ್ನೋದನ್ನು ತೋರಿಸುತ್ತೇನೆ ಎಂದು ತೊಡೆ ತಟ್ಟಿದರು. ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಲಿಲ್ಲ ಎಂಬ ಕಾರಣಕ್ಕೆ ರಾಜ್ಯದಾದ್ಯಂತ ಸಂಕಲ್ಪಯಾತ್ರೆ ಮಾಡಿದ್ದರು. ಇದೀಗ ಯಡಿಯೂರಪ್ಪ ತಮ್ಮ ಬೆನ್ನಿಗೆ ಚೂರಿ ಹಾಕಿದ್ದು, ತಾವು ಸಹ ರಾಜ್ಯದಾದ್ಯಂತ ಸಂಕಲ್ಪಯಾತ್ರೆ ನಡೆಸಿ ಯಡಿಯೂರಪ್ಪ ವಿರುದ್ಧ ಪ್ರಚಾರ ಮಾಡುವುದಾಗಿ ಗುಡುಗಿದರು.
Comments