'ಕೈ' ಪಕ್ಷಕ್ಕೆ ಬಿಗ್ ಶಾಕ್, ಜೆಡಿಎಸ್ ಗೆ ಸೇರಲಿದ್ದಾರಾ ಅಂಬಿ..!!
ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯದ ಕಾವು ಹೆಚ್ಚುತ್ತಿದೆ. ಅರ್ಜಿ ಸಲ್ಲಿಸದಿದ್ದರೂ ಚಿತ್ರನಟ, ಮಾಜಿ ಸಚಿವ ಎಂ.ಎಚ್. ಅಂಬರೀಷ್ ಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಹೀಗಿದ್ದೂ ಸ್ಪರ್ಧಿಸಲು ಅವರು ಮೀನಾಮೇಷ ಎಣಿಸುತ್ತಿದ್ದು ನಾಮಪತ್ರ ಸಲ್ಲಿಸಿಲ್ಲ, ಹಾಗೂ ಸಲ್ಲಿಕೆಗೂ ಮುಂದಾಗಿಲ್ಲ. ಸದ್ಯಕ್ಕೆ ಅವರು ಕಾಂಗ್ರೆಸ್ ಬಿಡಲಿದ್ದಾರೆ, ಜೆಡಿಎಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಅದರಲ್ಲೂ ಮುಖ್ಯವಾಗಿ ಮಂಡ್ಯದಲ್ಲಿ ಅವರು ಜೆಡಿಎಸ್ ಸೇರುವುದು ಖಚಿತ ಎಂಬ ಮಾತುಗಳು ಕೇಳಿ ಬರುತ್ತಿವೆ.
ಜೆಡಿಎಸ್ ಸೇರಿ ಸದ್ಯಕ್ಕೆ ಸ್ಪರ್ಧೆಯಿಂದ ಹೊರಗುಳಿಯುವುದು, ಆ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರವನ್ನು ನಡೆಸುವ ಗುರಿಯನ್ನು ಅಂಬರೀಷ್ ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ ಮುಂದೆ ಮೇಲ್ಮನೆ ಪ್ರವೇಶಿಸುವ ಉದ್ದೇಶವನ್ನು ಅವರಿಗಿದೆಯಂತೆ.
Comments