ಕಾಂಗ್ರೇಸ್ ಪಕ್ಷದ ಅಧ್ಯಕ್ಷರೊಬ್ಬರು ಸೋತ ಉದಾಹರಣೆಯೇ ಇಲ್ಲ: ಡಾ. ಜಿ ಪರಮೇಶ್ವರ್







ಕೊರಟಗೆರೆ ಏ. 22:- ಇಡೀ ಕಾಂಗ್ರೇಸ್ ಪಕ್ಷದ ಇತಿಹಾಸದಲ್ಲಿ ಪಕ್ಷದ ಅಧ್ಯಕ್ಷರೊಬ್ಬರು ಸೋತಿರುವ ಉದಾಹರಣೆಯಿಲ್ಲ ಆದರೆ ಕಳೆದ ಬಾರಿ ನಾನು ಸೊತಿದ್ದೇನೆ...! ಇದ್ದನ್ನೇ ಸಾವಾಲಿಗಿಟ್ಟುಕೊಂಡು ಈ ಬಾರಿ ಕೊರಟಗೆರೆಯಿಂದ ಸ್ಪರ್ಧಿಸುತ್ತಿದ್ದು ಇದು ಪರಮೇಶ್ವರ್ ಒಬ್ಬನ ಸ್ಪರ್ಧೆಯಲ್ಲ ನಿಮ್ಮಲ್ಲರ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ತಿಳಿಸಿದರು. ಪಟ್ಟಣ ದಲ್ಲಿನ ಪಕ್ಷದ ಕಚೇರಿಯ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಪಟ್ಟಣ ದಲ್ಲಿನ ಪಕ್ಷದ ಕಚೇರಿಯ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯದಲ್ಲಿ ನಿರುದ್ಯೋಗಿ ಯುವಕ-ಯುವತಿಯರಿಗೆ ಪ್ರತಿವರ್ಷ 40 ಸಾವಿರ ಸಕರ್ಾರಿ ಉದ್ಯೋಗ ನೀಡುವುದರೊಂದಿಗೆ 5 ವರ್ಷಗಳಲ್ಲಿ 2 ಲಕ್ಷ ಉದ್ಯೋಗ ನೀಡಲಾಗಿದೆ ಪಧಾನ ಮಂತ್ರಿ ನರೇಂದ್ರಮೊದಿ ಚುನಾವಣಾ ಸಮಯದಲ್ಲಿ ಯುವಕರಿಗೆ ಭರವಸೆ ನೀಡಿದಂತೆ ಪ್ರತಿ ವರ್ಷ 2 ಲಕ್ಷ ಉದ್ಯೋಗ ನೀಡುವ ಭರವಸೆ ಈಡೇರಿಸದೆ ಡೊಳ್ಳು ಭರವಸೆ ನೀಡಿದ್ದು ಮಂತ್ರಿಗಳಾಗಿ ಕೇವಲ ವಿದೇಶಿ ಪ್ರವಾಸದ ಪ್ರಧಾನ ಮಂತ್ರಿಯಾದರು ಎಂದು ವ್ಯಗ್ಯವಾಡಿದರು.
ಅವರು ಕೊರಟಗೆರೆ ಕ್ಷೇತ್ರದಲ್ಲಿ ಆಶಾದಾಯಕ ಹೊತ್ತು ಜೆಡಿಎಸ್ ಪಕ್ಷ ಸೇರಿದ ಯುವಕರು ಕಳೆದ 5 ವರ್ಷಗಳಲ್ಲಿ ಯಾವುದೇ ಫಲಿತಾಂಶ ದೊರೆಯದೆ ಜೆಡಿಎಸ್ ತೋರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಯುವಕರಿಗೆ ಕಾಂಗ್ರೆಸ್ ಪಕ್ಷ ಸ್ವಾಗತಿಸುವುದರೊಂದಿಗೆ ಮುಂದಿನ ದಿನಗಳಲ್ಲಿ ಕೋರಾ ಹೋಬಳಿಯಲ್ಲಿ ನಿಮರ್ಿಸಿರುವ ಕೈಗಾರಿಕಾ ಕ್ಷೇತ್ರದಲ್ಲಿ ಸ್ಥಳಿಯರಿಗೆ ನೀಡುವ ಮೀಸಲಾತಿಯಲ್ಲಿ ನಿರದ್ಯೋಗಿ ಯುವಕರಿಗೆ ಉದ್ಯೋಗ ಕೊಡಿಸುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಸದ ಮುದ್ದಹನುಮೇಗೌಡ, ತೆಂಗು ಮತ್ತು ನಾರು ಅಭಿವೃಧ್ದಿ ಅಧ್ಯಕ್ಷ ಜಿ.ವೆಂಕಟಾಚಲಯ್ಯ, ಕೌಶಲ್ಯಾಭಿವೃಧ್ದಿ ನಿಗಮದ ಅಧ್ಯಕ್ಷ ಮುರಳೀಧರ ಹಾಲಪ್ಪ, ಜಿ.ಪಂ.ಮಾಜಿ ಆಧ್ಯಕ್ಷ ಜಾಲಿಗಿರಿ ಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರಯ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜೇಸುದಾಸ್, ದಿನೇಶ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಜಯಮ್ಮ, ಯುವಕಾಂಗ್ರೆಸ್ ಅಧ್ಯಕ್ಷ ವಿನಯ್ಕುಮಾರ್, ಎ.ಡಿ.ಬಲರಾಮಯ್ಯ, ಮಯೂರಗೋವಿಂದರಾಜು ಸೇರಿದಂತೆ ಇತರರು ಇದ್ದರು. (ಚಿತ್ರ ಇದೆ)
ನಾನು ಸದಾಶಿವ ಆಯೋಗದ ವಿರೋಧಿಯಲ್ಲ:
- ನನ್ನ ವಿರೋಧಿಗಳ ನನ್ನ ಬಗ್ಗೆ ವೈಯಕ್ತಿಕ ಆರೋಪ ಮಾಡಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ನಾನು ಇದರ ವಿರೋಧಿಯಲ್ಲ ಪರವಾಗಿದ್ದೇನೆ... ಎಡಗೈ ಸಮುದಾಯದ ಯುವಕರನ್ನು ದಾರಿ ತಪ್ಪಿಸಲು ತಪ್ಪು ಸಂದೇಶಗಳನ್ನು ನೀಡುತ್ತಿದ್ದು ಇದನ್ನು ನಂಬಬೇಡಿ ಆಯೋಗ ರಚನೆ ಮಾಡಿದಾಗ ನಾನು ಕ್ಯಾಬಿನೆಟ್ ಸಚಿವ ನಾನು ಇದರ ಪರ ಇದಕ್ಕೆ ಪೂರಕಾವಿ ಈಗ ಆಧಿಜಾಂಬವ ನಿಗಮವನ್ನು ಸ್ಥಾಪಿಸಿ 500 ಕೋಟಿ ಅನುಧಾನ ಮೀಸಲಿಟ್ಟಿದ್ದೇನೆ ಎಂದರು.
ಯಡ್ಯೂರಪ್ಪ ಯಾಕೆ ಅಂಬೇಡ್ಕರ್ ಪೋಟೋ ತೆಗ್ಸಿದ್ರಿ !??:-
ಕುಮಾರಸ್ವಾಮಿ ಮುಖ್ಯಂತ್ರಿಯಾಗಿದ್ದಾಗ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಅಂಬೇಡ್ಕರ್ ಪೋಟೋ ಇತ್ತು ಆದರೆ ಯಡ್ಯೂರಪ್ಪ ಅದನ್ನು ತೆಗೆಸಿದ್ರು ಅದೇ ರೀತಿ ಅನಂತ್ ಕುಮಾರ್ ಹೆಗ್ಗಡೆ ಸಂಮಿದಾನ ಬದಲಾಯಿಸುವ ಮಾತನಾಡುತ್ತಿದ್ದಾರೆ ಇದು ಇದೇ ರೀತಿ ದೋರಣೆ ಮಾಡಿದ್ರ ಹೋರಾಟದ ಮೂಲಕ ಉತ್ತರ ನೀಡಬೇಕಾಗುತ್ತದೆ ಎಂದು ಗುಡುಗಿದರು.
Comments