ಕಾಂಗ್ರೇಸ್ ಸರ್ಕಾರ ಯಾವುದೇ ಅಭಿವೃದ್ಧಿ ಮಾಡಿಲ್ಲ : ವೈ.ಹೆಚ್ ಹುಚ್ಚಯ್ಯ
ಕೊರಟಗೆರೆ ಏ.:- ರಾಜ್ಯದಲ್ಲಿ ದಲಿತರ, ಹಿಂದುಳಿದವರ ಹೆಸರಿನಲ್ಲ ಅಧಿಕಾರ ಪಡೆದು ಯಾವುದೇ ಅಭಿವೃದ್ಧಿಯನ್ನು ರಾಜ್ಯ ಸರ್ಕಾರ ಮಾಡುತ್ತಿಲ್ಲ ಎಂದು ಕೊರಟಗೆರೆ ಬಿಜೆಪಿ ಅಭ್ಯರ್ಥಿ ವೈ.ಹೆಚ್ ಹುಚ್ಚಯ್ಯ ಗುಡುಗಿದರು.
ಪಟ್ಟ ಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಕಾಂಗ್ರೇಸ್ ಪಕ್ಷದಿಂದ ಯಾವುದೇ ಜನಪರ ಯೋಜನೆಗಳು ಜಾರಿಯಾಗಿಲ್ಲ ಅನ್ನಬಾಗ್ಯದಂತಹ ಯೋಜನೆಯನ್ನು ಜಾರಿಗೊಳಿಸಿ ಜನರನ್ನು ಸೋಮಾರಿಗಳನ್ನಾಗಿ ಮಾಡಿದ್ದಾರೆ ದುಡಿಯುವಂತಹ ಕೈಗಳಿಗೆ ಕೆಲಸ ನೀಡಿಲ್ಲ, ಪ್ರಚಾರಕ್ಕೆ ಖರ್ಚು ಮಾಡಿರುವ ಹಣದಲ್ಲಿ ಅಭಿವೃದ್ಧಿಯನ್ನು ಮಾಬಹುದಿತ್ತು ರಾಜ್ಯದಲ್ಲಿ ರೈತರ ಆತ್ಮಹತ್ಯ, ಅತ್ಯಾಚಾರದಂತಹ ಪ್ರಕರಗಳು ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹರಿಯಾಯ್ದರು.
ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಸಾಲ ನೀಡುತ್ತೇವೆ, ಉದ್ಯೋಗ ನೀಡುತ್ತೇನೆ ಎನ್ನುವ ಟೊಳ್ಳು ಬರವಸೆಯನ್ನು ನೀಡಿ ಸಮಾವೇಶಗಳನ್ನು ಮಾಡಿದ್ದು ಬಿಟ್ಟರೆ ಯಾವುದೇ ರೀತಿಯ ಅಭಿವೃದ್ಧಿ ಕ್ಷೇತ್ರದಲ್ಲಿ ನಡೆದಿಲ್ಲ ಎಂದರು.
ಈ ಬಾರಿ ಕಾಂಗ್ರೇಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳನ್ನು ಕ್ಷೇತ್ರದ ಜನರು ತಿರಸ್ಕರಿಸಲಿದ್ದಾರೆ ಬಿಜೆಪಿ ಬಾವುಟ ಹಾರಲಿದ್ದು ಕ್ಷೇತ್ರದಲ್ಲಿ ಬಹುತೇಕ ಗ್ರಾಮಗಳೇ ಬಿಜೆಪಿಗೆ ಬದಲಾಗಿವೆ, ಹಣದ ಹೊಳೆಯನ್ನೇ ಕ್ಷೇತದಲ್ಲಿ ಹರಿಸುತ್ತಿದ್ದಾರೆ ಆದರೆ ಕ್ಷೇತ್ರದ ಮತದಾರರು ಪ್ರಜ್ಞಾವಂತರಾಗಿದ್ದು ಈ ಬಾರಿ ಬಿಜೆಪಿಯನ್ನು ಬೆಂಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
24 ಕ್ಕೆ ನಾಪತ್ರ ಸಲ್ಲಿಕೆ:-
ಬಿಜೆಪಿ ಅಭ್ಯಥರ್ಿಯಾಗಿ ಏ.24 ಕ್ಕೆ 10. 30ಕ್ಕೆ 10 ಸಾವಿರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲಿದ್ದೇನೆ ಎಲ್ಲಾ ಬಿಜೆಪಿ ಬೆಂಬಲಿಗರು ಕಾರ್ಯಕ್ರಮಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿ ಮಹಿಳಾ ಮೋಚರ್ಾ ಅಧ್ಯಕ್ಷ ಸತ್ಯವತಿ, ಜಿಲ್ಲಾ ಉಪಾಧ್ಯಕ್ಷ ಶಿವರುದ್ರಯ್ಯ, ದೇವರಾಜು, ಜಿಲ್ಲಾ ಯುವ ಮೋಚರ್ಾ ಕಾರ್ಯದಶರ್ಿ ರುದ್ರೇಶ್, ಕೊರಟಗೆರೆ ತಾಲೂಕು ಯುವ ಮೋಚರ್ಾ ಅಧ್ಯಕ್ಷ ಗುರುದತ್,ತಾಲೂಕು ಸ್ವಚ್ಚಭಾರತ ಅಭಿಯಾನದ ಅಧ್ಯಕ್ಷ ಮೆಡಿಕಲ್ ಕುಮಾರ್ ಮುಖಂಡರಾದ ಅರುದಂತಿ ಹೆಗ್ಗಡೆ ಸೇರಿದಂತೆ ಇತರರು ಇದ್ದರು. (ಚಿತ್ರ ಇದೆ)
ಸುದ್ದಿಘೋಷ್ಠಿಯಲ್ಲಿ ಗೊಂದಲ:-
ಬಿಜೆಪಿ ಟಿಕೆಟ್ ಆಕಾಂಕ್ಷಿ ಎಸ್.ಆರತಿ ನಾನು ಪಕ್ಷಕ್ಕಾಗಿ ದುಡಿದಿದ್ದೇನೆ ನಾನು ಟಿಕೆಟ್ ಆಕಾಕ್ಷಿ ಈಗ ನಾನು ಬಿಜೆಪಿ ಬಂಡಾಯ ಅಭ್ಯಥರ್ಿಯಾಗಿ ಏ.23 ರಂದು ನಾಮಪತ್ರ ಸಲ್ಲಿಸುತ್ತೇನೆ ಎಂದು ಹೇಳಿದ ಹಿನ್ನೆಲೆಯಲ್ಲಿ ಗೊಂದಲ ಸೃಷ್ಟಿಯಾಗಿ ಆರತಿ ಮತ್ತು ಹುಚ್ಚಯ್ಯ ಬೆಂಬಲಿಗರ ನಡುವ ಮಾತಿನ ಚಕಮಕಿ ನಡೆದು ನಂತರ ಆರತಿ ಸುದ್ದಿಗೋಷ್ಠಿಯಿಂದ ಹೊರ ನಡೆದ ಘಟನೆ ನಡೆಯಿತು.
Comments