ಬಿಜೆಪಿ ಬಂಡಾಯ ಅಭ್ಯರ್ಥಿ ಎಂ .ಆರತಿ ನಾಮಪತ್ರ ಸಲ್ಲಿಕೆ
ಕೊರಟಗೆರೆ :- ಬಿಜೆಪಿ ವರಿಷ್ಠರು ಜಿಲ್ಲೆಗೊಬ್ಬ ಮಹಿಳೆಯರಿಗೆ ಟಿಕೆಟ್ ನೀಡುತ್ತೇವೆ ಎಂದು ಹೇಳಿದ್ದರು ಆದ್ದರಿಂದಲೇ ನಾನು ಸಂಘಟನೆಲ್ಲಿ ತೊಡಗಿದ್ದೆ ವರಿಷ್ಠರು ಜಿಲ್ಲೆಯಲ್ಲಿ ಏಕೈಕ ಆಕಾಂಕ್ಷಿಯಾಗಿದ್ದ ನನ್ನನ್ನು ನಿರ್ಲಕ್ಷಿದ್ದಾರೆ ಆದ್ದರಿಂದ ನಾನು ಬಿಜೆಪಿ ಬಂಡಾಯ ಅಭ್ಯಥರ್ಿಯಾಗಿ ಸ್ಪರ್ಧಿಸುತ್ತೇನೆ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂ.ಆರತಿ ತಿಳಿಸಿದರು.
ತಾಲೂಕಿನ ತಣ್ಣೇನಹಳ್ಳಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ವರಿಷ್ಠರು ಸಂಘಟನೆಯ ಆದಾರದಲ್ಲಿ ಸಮೀಕ್ಷೆ ನಡೆಸಿ ಟಿಕೆಟ್ ನೀಡುತ್ತೇವೆ ಎಂದು ತಿಳಿಸಿದ್ದ ಹಿನ್ನೆಲೆಯಲ್ಲಿ ನಾನು ಪಕ್ಷ ಸಂಘಟನೆಯಲ್ಲಿ ತೊಡಗಿದ್ದೆ ಟಿಕೆಟ್ಗಾಗಿ ಯಾವ ದೊಡ್ಡ ನಾಯಕರನ್ನು ಭೇಟಿ ಮಾಡಿಲ್ಲ ನಾನು ಬಿಜೆಪಿಯ ಮೂಲ ಆಕಾಂಕ್ಷಿ, ಕೊರಟಗೆರೆ ಕ್ಷೇತ್ರದ ಬಹುತೇಕ ಮುಖಂಡರು ಹಾಲಿ ಘೋಷಣೆಯಾಗಿರುವ ಅಭ್ಯರ್ಥಿಯ ವಿರೋಧವಾಗಿದ್ದು ತಮ್ಮ ಪಕ್ಷ ನೀಡಿರುವಂತಹ ಹುದ್ದೆಗೆ ರಾಜಿನಾಮೆಯನ್ನು ನೀಡಿದ್ದು ಎಲ್ಲರೂ ನನ್ನ ಬೆಂಬಲಕ್ಕಿದ್ದು ಪಕ್ಷದಲ್ಲಿ ಹಲವು ಕಾರ್ಯಕಾರಣಿಯಲ್ಲಿ ಸೇವೆ ಸಲ್ಲಿಸಿದ್ದು ಬೆಂಗಳೂರು ಎಸ್ಸಿ ಮೋಚರ್ಾದ ನಗರ ಕಾರ್ಯದಶರ್ಿಯಾಗಿ ಪಕ್ಷ ಸಂಘನೆಯಲ್ಲಿ ತೊಡಗಿದ್ದೇನೆ ಎಂದರು.
ಪಕ್ಷ ನನಗೆ ಟಿಕೆಟ್ ನಿರಾಕರಿಸಿದೆ ಆದರೆ ನಾನು ಸ್ಪಧರ್ೆಯಿಂದ ಹಿಂದೆ ಸರಿಯದೇ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಏ.23 ಕ್ಕೆ ನಾಮಪತ್ರ ಸಲ್ಲಿತ್ತೇನೆ ಎಂದು ಸ್ಪಷ್ಟಪಡಿಸಿದರು.
ಸುದ್ಧಿಗೋಷ್ಠಿಯಲ್ಲಿ ತಣ್ಣೇಹಳ್ಳಿ ರವಿ, ಆಳಾಲಸಂದ್ರ ಮಂಜುನಾಥ್, ಬೆಳಧರ ಈಶ್ವರ್, ಥರಟಿ ಶಂಕರ್ ಸೇರಿದಂತೆ ಇತರರು ಇದ್ದರು. (ಚಿತ್ರ ಇದೆ)
Comments