ಚಾಮುಂಡೇಶ್ವರಿ ಕ್ಷೇತ್ರದಲ್ಲಿ 2ನೇ ಸುತ್ತಿನ ಅಬ್ಬರದ ಪ್ರಚಾರ ಆರಂಭಿಸಿದ ಕುಮಾರಣ್ಣ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್ ಪ್ರತಿಷ್ಠೆಯ ಕಣವಾಗಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಜಿ.ಟಿ. ದೇವೇಗೌಡರ ಪರವಾಗಿ ಎರಡನೇ ಸುತ್ತಿನ ಮತಯಾಚನೆ ಆರಂಭಿಸಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಸಿದ್ದಲಿಂಗಪುರ, ಬೆಲವತ್ತ, ಕಳಸ್ತವಾಡಿ, ನಾಗನಹಳ್ಳಿ, ಲಕ್ಷ್ಮೀಪುರದಲ್ಲಿ ತಮ್ಮ ಅಭ್ಯರ್ಥಿ ಜಿ.ಟಿ.ದೇವೇಗೌಡ ಪರ ಅಬ್ಬರದ ಪ್ರಚಾರ ನಡೆಸಿದರು, ಸಿದ್ದಲಿಂಗಪುರದಲ್ಲಿ ಜೆಡಿಎಸ್ ಕಾರ್ಯಕರ್ತರು ಕುಮಾರಸ್ವಾಮಿ ಅವರಿಗೆ ಅದ್ಧೂರಿ ಸ್ವಾಗತ ಕೋರಿದರು. ಪ್ರಚಾರದ ವೇಳೆ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಹಾಗೂ ಬಾದಾಮಿ ಕ್ಷೇತ್ರದಲ್ಲಿ ನಿಂತರೂ ಅವರನ್ನು ಸೋಲಿಸಿ ಮನೆಗೆ ಕಳುಹಿಸುತ್ತೇವೆ. ರಾಜ್ಯದಲ್ಲಿ ಆಡಳಿತ ದುರ್ಬಳಕೆ ಮಾಡಿ, ಲೂಟಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಜೆಡಿಎಸ್ ಈ ಚುನಾವಣೆಯಲ್ಲಿ ಏನು ಅನ್ನುವುದನ್ನೂ ತೋರಿಸುತ್ತೇವೆ . ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿರುವ ಅಭಿವೃದ್ಧಿ ಕೆಲಸವಾದರೂ ಏನು, ಸಾರ್ವಜನಿಕರಿಗಾಗಿ ಉತ್ತಮ ಆಡಳಿತವನ್ನು ನಡೆಸಲಿಲ್ಲ ದಬ್ಬಾಳಿಕೆಯಲ್ಲಿ ಮುಳುಗಿರುವ ಜನರು, ಮತದಾನದ ಮೂಲಕ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
Comments