ಅತ್ಯಾಚಾರಿಗಳಿಗೆ ಮರಣ ದಂಡನೆ ಶಿಕ್ಷೆ ನೀಡಲು ಸಂಮಿದಾನ ತಿದ್ದುಪಡಿಗೆ ಒತ್ತಾಯ
ಕೊರಟೆಗೆರೆ :- ಕಾಶ್ಮೀರದಲ್ಲಿನ ಪುಟ್ಟ ಬಾಲೆ ಅಸೀಫಾ ಮೇಲೆ ಅತ್ಯಾಚಾರ ಮತ್ತು ದೇಶದಲ್ಲಿ ಮಕ್ಕಳಮೇಲಿನ ನಡೆಯುತ್ತಿರುವ ದೌಜನ್ಯವನ್ನು ತಡೆಯಲು ಕಾನೂನು ತಿದ್ದುಪಡಿ ಮಾಡಿ ಅವಂತರಿಗೆ ಮರಣ ದಂಡನೆ ವಿಧಿಸಬೇಕು ಎಂದು ವಿವಿಧ ಸಂಘಟನೆಗಳು ಗುರುವಾರ ಪಟ್ಟ ಣದಲ್ಲಿ ಪ್ರತಿಭಟಿಸಿ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿಯನ್ನು ಸಲ್ಲಿಸಿದರು.
ಮಾದಿಗ ದಂಡೋರ ಯುವ ಸೇನೆ, ಟಿಪ್ಪು ಕನ್ನಡಿಗರ ಯುವ ವೇಧಿಕೆ ಸಂಘ ಸೇರಿದಂತೆ ಇತರೆ ಮುಸ್ಲಿಂ ಸಂಘಟನೆಗಳ ನೇತೃತ್ವದಲ್ಲಿ ಮನವಿಯನ್ನು ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿಲ್ಲಾ ಮಾದಿಗ ದಂಡೋರ ಯುವ ಸೇನೆ ಅಧ್ಯಕ್ಷ ಜೆಟ್ಟಿ ಅಗ್ರಹಾರ ನಾಗರಾಜು ಮಾತನಾಡಿ 8 ವರ್ಷದ ಹಸುಳೆಯನ್ನು ಅಪರಿಸಿ 8 ದಿನ ನಿರಂತರವಾಗಿ 6 ಜನ ಸಾಮೂಹಿಕ ಅತ್ಯಾಚಾರ ಮಾಡಿರುವುದು ನೋವಿನ ಸಂಗತಿ ಇಂತಹ ಘೋರ ಅಪರಾದವನ್ನು ಮಾಡಿರುವಂತಹ ಆರೋಪಿಗಳಿಗೆ ಈಗಿನ ಕಾನೂನನ್ನು ತಿದ್ದುಪಡಿ ಮಾಡಿ ದೇಶದಲ್ಲಿ ಯಾವುದೇ ಲೈಂಗಿಕ ಅತ್ಯಾಚಾರ ಘಟನೆ ನಡೆದ ಕೂಡಲೇ ನೆರೆ ದೇಶಗಳಲ್ಲಿ ಇಂತಹ ಆರೋಪಿಗಳಿಗೆ ನಡು ರಸ್ತೆಯಲ್ಲಿ ಗುಂಡಿಕ್ಕಿ ಕೊಲ್ಲುವ ಅಥವಾ ಮರಣದಂಡನೆಯಂತಹ ಕಾನೂನು ಗಳನ್ನು ನಮ್ಮಲ್ಲೂ ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ನಮ್ಮ ದೇಶಲದಲ್ಲೂ ಇಂತಹ ಕಾನೂನುಗಳು ಜಾರಿಯಾದರೆ ಮೃಗಗಳಂತೆ ವರ್ತಿಸುವ ಅತ್ಯಾಚಾರ ವ್ಯಸಗುವವರಿಗೆ ನಟುಕ ಹುಟ್ಟಿ ಇಂತಹ ತಪ್ಪುಗಳ ಸಂಖ್ಯೆ ಕ್ಷಿಣಿಸಲಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಯೋಜನಾ ಸಮಿತಿ ಸದಸ್ಯ ನಯಾಜ್ ಅಹಮದ್, ತಾಲೂಕು ಟಿಪ್ಪು ಯುವ ಸೇನೆಯ ಅಧ್ಯಕ್ಷ ಸೈಯದ್ ಫಯಾಜ್ ಅಹಮದ್, ಉಪಾದ್ಯಕ್ಷ ವಾಸೀಂ ಅಕ್ರಂ, ನಗರ ಅಧ್ಯಕ್ಷ ಅಬ್ದುಲ್ ರಾಜಿಕ್ ಅಹಮದ್,ಕಾರ್ಯದಶರ್ಿ ರಂಗನಾಥ್, ನಗರ ಕಾರ್ಯದರ್ಶಿ ಮಹಮದ್ ಫಾರೂಕ್, ಉಪಾಧ್ಯಕ್ಷ ಮಹಮದ್ ಅಸೀಪ್ ಸೇರಿದಂತೆ ಇತರರು ಇದ್ದರು.
Comments