ಕೇಸು ಖುಲಾಸೆ ಮಾಡದಿದ್ದರೆ ಮತದಾನ ಬಹಿಷ್ಕಾರ: ತಹಶೀಲ್ದಾರ್ ಗೆ ಮನವಿ
ಕೊರಟಗೆರೆಏ.:- ಅಮಾಯಕ ರೈತರು, ದಲಿತರು, ಅಲ್ಪಸಂಖ್ಯಾತ ಮಹಿಳೆಯರ ಮೇಲೆ ಹಾಕಿರುವಂತಹ ಕೇಸನ್ನು ಹಿಂಪಡೆಯಬೇಕು ಇಲ್ಲವಾದಲ್ಲಿ ಕುಟುಂಬ ಸಮೇತ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಎಂದು ಪ.ಪಂ ಸದಸ್ಯ ನಯಾಜ್ ಅಹಮದ್ ಸೇರಿದ ಇತರರು ಪ್ರತಿಭಟಿಸಿ ತಹಶೀಲ್ದಾರ್ ಗೆ ಮನವಿಯನ್ನು ಸಲ್ಲಿಸಿದರು.
ಹಿನ್ನೆಲೆ:-2015ಸಾಲಿನಲ್ಲಿ ಪಟ್ಟ ಣದಲ್ಲಿ ಕುಡಿಯುವ ನೀರಿಗೆ ತಾತ್ವಾರವಿದ್ದ ಸಂದರ್ಭದಲ್ಲಿ ಪ.ಪಂ ಮುಖ್ಯಾಧಿಕಾರಿಗಳ ಮೌಖಿದ ಅದೇಶದ ಮೇರೆಗೆ ಸ್ವಂತ ಖಾಸಗೀ ಜಮೀನಿನಲ್ಲಿ ಪ.ಪಂ ಸದಸ್ಯ ನಯಾಜ್ ಅಹಮದ್ 4 ಮತ್ತು 5 ನೇ ವಾಡರ್್ಗೆ ನೀರನ್ನು ಪೂರೈಕೆ ಮಾಡಿದ್ದರು ವ್ಯವಸಾಯದ ಜಮೀನಿನಲ್ಲಿರುವ ನೀರನ್ನು ಪಟ್ಟಣಕ್ಕೆ ಪೂರೈಕೆ ಮಾಡಲು ಉಚಿತ ವಿದ್ಯುತ್ ಬಳಕೆ ಮಾಡಿದ್ದಾರೆ ಎನ್ನುವ ಅನಾಮದೇಹ ಅರ್ಜಿ ಸಲ್ಲಿಕೆಯಾಗಿತ್ತು ನಂತರ ಬೆಸ್ಕಾಂ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಬಳಕೆ ಮಾಡಿರುವುದರ ವಿರುದ್ಧ 1.7 ಲಕ್ಷ ದಂಡವಿಧಿಸಿ ಇದನ್ನು ಪಾವತಿಸುವಂತೆ ಅದೇಶ ನೀಡಿತ್ತು. ಇದನ್ನು ವಿರೋಧಿಸಿ 4 ಮತ್ತು 5 ನೇ ವಾಡರ್್ನ ಜನರೊಟ್ಟಿಗೆ ನಯಾಜ್ ಅಹಮದ್ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ವಿದ್ಯುತ್ ಬಿಲ್ ರದ್ದು ಮಾಡಬೇಕು ಎಂದು ಒತ್ತಾಯಿಸಿದ್ದು, ಪ್ರತಿಭಟನೆಯಿಂದ ಕಾನೂನು ಸುವ್ಯವಸ್ಥೆಗೆ ಮತ್ತು ತಾಲೂಕು ಕಚೇರಿಯ ಆವಣದಲ್ಲಿ ತೊಂದರೆ ಮಾಡಿದ್ದಾರೆ ಎಂದು ತಹಶೀಲ್ದಾರ್ 24 ಜನರ ವಿರುದ್ದ ದೂರು ದಾಖಲಿಸುವಂತೆ ಆದೇಶಿಸಿದ್ದ ಹಿನ್ನೆಲೆಯಲ್ಲಿ ಇವರ ವಿರುದ್ದ ದೂರ ದಾಖಲಾಗಿತ್ತು.
ಮನವಿಯನ್ನು ಸಲ್ಲಿಸಿ ಮಾತನಾಡಿದ ಪ.ಪಂ ನಯಾಜ್ ಅಹಮದ್ ಅಂದು ಪ್ರತಿಭಟನೆ ಮಾಡಲು ನಾವು ಪೊಲೀಸ್ ಇಲಾಖೆಗೆ ಮಾಹಿತಿಯನ್ನು ನೀಡಿದ್ದೇವೆ ಆದರೆ ಅಂದಿನ ತಹಶೀಲ್ದಾರ್ ಏಕೇಶ್ ಬಾಬು ನನ್ನ ಮತ್ತು ನನ್ನೊಟ್ಟಿಗೆ ಬಂದಿದ್ದ ಅಮಾಯಕ ಜನರ ವಿರುದ್ಧ ಕೇಸು ದಾಖಲಿಸಿರುವುದು ಖಂಡನೀಯ ಇದರಿಂದ ಕಳೆದ 3 ವರ್ಷದಿಂದ ಕೋಟಿಗೆ ಅಲೆಯುವಂತಾಗಿದ್ದು ನಾವು ಯಾವುದೇ ದರೋಡೆ, ದೌರ್ಜನ್ಯ ಮಾಡಿಲ್ಲ ನಮ್ಮ ವಿರುದ್ದ ಇರುವಂತ ಕೇಸನ್ನು ಖುಲಾಸೆ ಮಾಡಿ ಸಕರ್ಾರ ಅಮಾಯಕ ಕುಟುಂಬದ ರಕ್ಷಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರವೇ ವೇಧಿಕೆಯ ತಾಲೂಕು ಅಧ್ಯಕ್ಷ ಗೌಸ್ ಪೀರ್, ಹರೀಶ್, ರಾಧಮ್ಮ, ಮುಬೀನಾ, ಪುಷ್ಪಾ, ಅಣ್ಣಪ್ಪ, ಸಾಧಿಕ್, ಅಬ್ದುಲ್, ದಾದಾಫೀರ್, ಗೋವಿಂದರಾಜು ಸೇರಿದಂತೆ ಇತರರು ಇದ್ದರು. ( ಚಿತ್ರ ಇದೆ)
Comments