ಬಟವಾಡೆ ಹಣ ಡ್ರಾ ಮಾಡಿಕೊಳ್ಳಲು ಅವಕಾಶ ಮಾಡಿಕೊಡಿ

ಕೊರಟಗೆರೆ ಏ:- ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳು ಚುನಾವಣಾ ನೀತಿ ಸಂಹಿತೆ ಹೆಸರಿನಲ್ಲಿ ಜಿಲ್ಲೆಯ ಹಾಲು ಉತ್ಪಾಧಕರ ಬಟವಾಡೆ ಹಣವನ್ನು ಡಿಸಿಸಿ ಬ್ಯಾಂಕಿನ ಆಯಾ ಶಾಖೆಗಳಲ್ಲಿ ಹಣ ಡ್ರಾ ಮಾಡಂತೆ ಆದೇಶಿಸಿರುವುದನ್ನು ಪುನರ್ ಪರಿಶೀಲಿಸಿ ರೈತರ ಹಣವನ್ನು ಬಿಡುಗಡೆ ಮಾಡುವಂತೆ ಸೂಚಿಸಬೇಕು ಎಂದು ಗುಂಡಿನಪಾಳ್ಯ ಹಾಲು ಉತ್ಪಾಧಕರ ಸಂಘದ ಅಧ್ಯಕ್ಷ ಡಿ.ಶಿವಕುಮಾರ್ ಒತ್ತಾಯಿಸಿದ್ದಾರೆ.
ತಾಲೂಕಿನ ಗುಂಡಿನಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘ ಕಚೇರಿಯಲ್ಲಿ ನಡೆದ ಸುದ್ದಿಘೋಷ್ಠಿಯಲ್ಲಿ ಮಾತನಾಡಿದರು.
ಚುನಾವಣಾಧಿಕಾರಿಗಳ ಆದೇಶದಿಂದ ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಎಂಪಿಸಿಎಸ್ ಗಳ ಖಾತೆಯಲ್ಲಿರುವಂತಹ ಹಣವನ್ನು ನಗದೀಕರಿಕೊಳ್ಳಲು ಬಿಡದಿರುವುದರಿಂದ ಬಟವಾಡಿಯನ್ನು ರೈತರಿಗೆ ನೀಡಲು ಸಾಧ್ಯವಾಗುತ್ತಿಲ್ಲ ಹೈನುಗಾರಿಕೆಯನ್ನೇ ನಂಬಿಕೊಂಡು ಇರುವಂತಹ ರೈತರಿಗೆ ಮತ್ತು ಸ್ತ್ರೀ ಶಕ್ತಿ ಸದಸ್ಯರುಗಳಿಗೆ ಸಾಲದ ಕಂತುಗಳನ್ನು ಕಟ್ಟಲು, ಕುಟುಂಬ ನಿರ್ವಹಣೆ ಜೊತೆಗೆ ಜಾನುವಾರುಗಳ ಮೇವು ಮತ್ತು ಹಿಂಡಿ-ಬೂಸ ಸೇರಿದಂತೆ ಅವುಗಳ ಆಸ್ಪತ್ರೆಯ ವ್ಯಚ್ಚಕ್ಕೆ ತೊಂದರೆಯಾಗುತ್ತಿರುವುದರಿಂದ ತಾವುಗಳು ಮರು ಪರಿಶೀಲಸಿ ಖಾತೆಯಿಂದ ಹಣ ನಗದೀಕರಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ಎಸ್. ಮಂಜುನಾಥ್, ಸದದಸ್ಯರಾದ ಜಿ.ಸಿ ರಮೇಶ್, ನರಸಿಂಹಮೂತರ್ಿ, ಮಂಜುನಾಥ್, ಎಂ. ನಾಗರಾಜು ಸೇರಿದಂತೆ ಇತರೆ ಸದಸ್ಯರು ಇದ್ದರು. ( ಚಿತ್ರ ಇದೆ)
Comments