ಸ್ಯಾಂಡಲ್ ವುಡ್ ನ ಈ ಬೆಡಗಿ ಜೆಡಿಎಸ್ ಗೆ ಸೇರ್ಪಡೆ...!!
ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದಂತೆ ಹಲವು ಸ್ಯಾಂಡಲ್ ವುಡ್ ನಟ-ನಟಿಯರು ಜೆಡಿಎಸ್ ನತ್ತ ವಲಸೆ ಬರುತ್ತಿದ್ದಾರೆ. ಸ್ಯಾಂಡಲ್ ವುಡ್ ನ ಮಳೆ ಹುಡುಗಿ ನಟಿ ಪೂಜಾ ಗಾಂಧಿ ಇಂದು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಜೆಡಿಎಸ್ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಪಿ.ಜಿ.ಆರ್.ಸಿಂಧ್ಯಾ ಸಮ್ಮುಖದಲ್ಲಿ ಪೂಜಾ ಗಾಂಧಿ ಅಧಿಕೃತವಾಗಿ ಸೇರಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಯಚೂರು ವಿಧಾನಸಭಾ ಕ್ಷೇತ್ರದಿಂದ ಬಿಎಸ್‍ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಪೂಜಾ ಗಾಂಧಿ ಸ್ಪರ್ಧಿಸಿದರು. ದಿನದಿಂದ ದಿನಕ್ಕೆ ಜೆಡಿಎಸ್ ಪ್ರಬಲಗೊಳ್ಳುತ್ತಿದ್ದು, ಈ ಬಾರಿ ಅಧಿಕಾರ ಚುಕ್ಕಾಣಿ ಹಿಡಿಯುವುದರಲಿ ಎರಡು ಮಾತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
Comments