ಶಾಸಕ ವೆಂಕಟರಮಣಯ್ಯ ಆಸ್ತಿ 17.06 ಕೋಟಿ ಒಡೆಯ
ಶಾಸಕ ವೆಂಕಟರಮಣಯ್ಯ ಆಸ್ತಿ 17.06 ಕೋಟಿ ಎಂದು ಘೋಷಿಸಿ ಕೊಂಡಿದ್ದಾರೆ, ಕೈಯ್ಯಲ್ಲಿರುವ ನಗದು 99.38 ಲಕ್ಷ ರೂ. ಬ್ಯಾಂಕ್ ಹಾಗೂ ವಿವಿಧ ಹಣಕಾಸು ಸಂಸ್ಥೆಗಳಿಂದ 1.03 ಕೋಟಿ ಸಾಲ ಇರುವುದಾಗಿ ನಮೂದಿಸಿದ್ದಾರೆ, 5 ಬ್ಯಾಂಕ್ ಖಾತೆಗಳು, ಅಂಚೆ ಕಛೇರಿ, ವಿಮಾ ಕಂಪನಿಗಳಲ್ಲಿ 5.8 ಲಕ್ಷ ರೂಪಾಯಿ ಠೇವಣಿ, 1 ಲಾರಿ, 27 ಲಕ್ಷದ ಇನ್ನೋವಾ ಕಾರು, 180 ಗ್ರಾಂ ಚಿನ್ನ, 4,650 ಗ್ರಾಂ ಬೆಳ್ಳಿ ಸೇರಿ ಒಟ್ಟು 2 ಕೋಟಿ 41 ಲಕ್ಷದ ಚರಾಸ್ತಿ ಇದೆ, ಅಪ್ಪಕಾರನಹಳ್ಳಿಯಲ್ಲಿ 1.74 ಕೋಟಿ ಮೌಲ್ಯದ ಭೂಮಿ, ಬೆಂಗಳೂರಿನ ಸುಧಾಮನಗರ, ಲಕ್ಕಸಂದ್ರ, ಆರ್.ಕೆ.ಪುರ, ಗಾಂಧಿನಗರ ಸೇರಿ 6 ಕಡೆಗಳಲ್ಲಿ ವಾಣಿಜ್ಯ ಕಟ್ಟಡಗಳು ಇದ್ದು ಒಟ್ಟು ಮೌಲ್ಯ 10 ಕೋಟಿ 18 ಲಕ್ಷ ರೂ. ಅವರ ಪತ್ನಿ ಹೆಸರಿನಲ್ಲಿ 330 ಗ್ರಾಂ ಚಿನ್ನ, 17.54 ಲಕ್ಷ ಬ್ಯಾಂಕ್ ಬ್ಯಾಲೆನ್ಸ್, 15 ಸಾವಿರ ನಗದು ಹಾಗೂ ಗಂಧಿನಗರದಲ್ಲಿ 1.50 ಕೋಟಿ ಮೌಲ್ಯದ ವಾಣಿಜ್ಯ ಕಟ್ಟಡ ದೊಂದಿಗೆ ಆಸ್ತಿ ಮೌಲ್ಯ 2.11 ಇದೆ, 10.96 ಲಕ್ಷ ಸಾಲ ಇದೆ.
Comments