ಜೆಡಿಎಸ್ 2 ನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ... ಲಿಸ್ಟ್‌ನಲ್ಲಿ ಯಾರೆಲ್ಲಾ ಫೈನಲ್ ಆಗಿದ್ದಾರೆ ಗೊತ್ತಾ?
ರಾಜ್ಯ ವಿಧಾನಸಭೆ ಚುನಾವಣೆಯ 58 ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಇಂದು ಬಿಡುಗಡೆಯಾಗಿದೆ. ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರು 58 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದರು. ಜೆಡಿಎಸ್ ಎಲ್ಲ ಪಕ್ಷಗಳಿಗಿಂತ ಮೊದಲೇ 126 ಅಭ್ಯರ್ಥಿಗಳಿರುವ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.
ಜೆಡಿಎಸ್ ಮುಂದಿನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಗೂ ಮುನ್ನಾ ತನ್ನ ಮೊದಲ ಅಭ್ಯರ್ಥಿಗಳ 126 ಕ್ಷೇತ್ರಗಳ ಪಟ್ಟಿಯನ್ನು ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆ ಮಾಡಿತ್ತು. ಇನ್ನು ಬಿಡುಗಡೆಯಾಗಿರುವ ಪಟ್ಟಿಯಲ್ಲಿ ಇತ್ತೀಚಿಗಷ್ಟೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೇಟ್ ಸಿಗದೇ ಅಸಮಾಧನಗೊಂಡು ಜೆಡಿಎಸ್ ಸೇರಿಕೊಂಡಿದ್ದ ನಟ ಶಶಿಕುಮಾರ್ ಗೆ ಹೊಸದುರ್ಗದಿಂದ ಟಿಕೆಟ್ ನೀಡಲಾಗಿದೆ. ಇದಲ್ಲದೇ ರಾಮನಗರದಿಂದ ಸ್ಪರ್ಧೆ ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರ್ ಸ್ವಾಮಿ ಚನ್ನಪಟ್ಟಣ್ಣದಿಂದ ಕೂಡ ಸ್ಪರ್ಧೆ ಮಾಡುತ್ತಿದ್ದಾರೆ.
Comments