ಬಾಲಾಜಿ ಲೇಔಟ್ ಬೆಳಗಿನ ವಾಯು ವಿಹಾರಿಗಳಿಂದ ಮತದಾನ ಪ್ರತಿಜ್ಞಾವಿಧಿ ಸ್ವೀಕಾರ




ನಗರದ ಶರಣ ಸಾಹಿತ್ಯ ಪರಿಷತ್ ಮತ್ತು ಬಾಲಾಜಿ ಲೇಔಟ್ ಬೆಳಗಿನ ವಾಯು ವಿಹಾರಿಗಳ ಮಿತ್ರ ಬಳಗದ ವತಿಯಿಂದ ಬಾಲಾಜಿ ಲೇಔಟ್ ನಲ್ಲಿ ಬಸವ ಜಯಂತಿ ಆಚರಿಸಲಾಯಿತು, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹಾಲಿಂಗಯ್ಯ ಮಾತನಾಡಿ ಶರಣ ಸಾಹಿತ್ಯಕ್ಕೆ ತಮ್ಮ ವಚನಗಳಿಂದ ಅಪಾರವಾದ ಕೊಡುಗೆ ನೀಡಿದ್ದಾರೆ, ಅವರ ತತ್ವಗಳು, ವಚನಗಳ ಆತ್ಮಾವಲೋಕನ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಂಡಾಗ ಸಾರ್ಥಕವಾಗುತ್ತದೆ ಎಂದರು. ನಗರ ಸಭಾ ಸದಸ್ಯ ವಡ್ಡರಹಳ್ಳಿ ರವಿಕುಮಾರ್ ಮಾತನಾಡಿ ಆರೋಗ್ಯಕರ ಸಮಾಜ ನಿರ್ಮಿಸುವಲ್ಲಿ 12ನೇ ಶತಮಾನದಲ್ಲಿ ಬಸವೇಶ್ವರರು ಕಾಯಕವೇ ಕೈಲಾಸ ಎಂಬ ತತ್ವದಡಿ ಕಷ್ಟ ಪಟ್ಟು ದುಡಿದು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು, ವರ್ಗಭೇದ, ಜಾತಿ ಭೇದ ರಹಿತ ಸಮಾಜ ಪ್ರಸ್ತುತ ಕಾಲಘಟ್ಟಕ್ಕೆ ಅವಶ್ಯವಾಗಿದೆ ಎಂದರು. ಬಸವ ಜಯಂತಿ ಪ್ರಯುಕ್ತ ಲೇಔಟ್ ನಲ್ಲಿ ಸಸಿಗಳನ್ನು ನೆಡಲಾಯಿತು, ಎಲ್ಲರಿಗೂ ಶಿಕ್ಷಕ ಜ್ಯೋತಿಕುಮಾರ್ ಮತದಾನ ಪ್ರತಿಜ್ಞಾವಿಧಿ ಬೋಧಿಸಿದರು.
Comments