ಶಿಕ್ಷಕರ ವರ್ಗಾವಣೆಯಲ್ಲಿ 45 ಲಕ್ಷ, ಗುತ್ತಿಗೆದಾರರಿಂದ 10% ಕಮೀಷನ್ ಶಾಸಕ ವೆಂಕಟರಮಣಯ್ಯ ವಿರುದ್ಧ ಸತ್ಯನಾರಾಯಣಗೌಡ ಆರೋಪ

19 Apr 2018 6:21 PM |
398 Report

ನೆನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಶಾಸಕ ವೇಂಕಟರಮಣಯ್ಯ ಮೇಲೆ ಆರೋಪ ಮಾಡಿದರು, ಸಂಸದ ವೀರಪ್ಪಮೊಯ್ಲಿ ಯವರಿಗೆ ಲೋಕಸಭಾ ಚುನಾವಣೆಯಲ್ಲಿ 1 ಕೋಟಿ ಕೊಟ್ಟಿದ್ದಾರೆ, ಶಿಕ್ಷಕರ ವರ್ಗಾವಣೆಯಲ್ಲಿ ಅಕ್ರಮ ನಡೆದಿದೆ, ಸ್ಥಳೀಯ ಗುತ್ತಿಗೆದಾರರಿಗೆ ಕಳೆದ ಐದು ವರ್ಷಗಳಲ್ಲಿ ಒಂದೂ ಗುತ್ತಿಗೆ ನೀಡದೆ ಹೊರಗಿನವರಿಂದಲೇ ಕಾಮಗಾರಿ ಮಾಡಿಸಿ 10% ಕಮೀಷನ್ ಪಡೆದಿದ್ದಾರೆ, ನಾನು ಪ್ರಾಮಾಣಿಕ ಎಂದು ಹೇಳಿಕೊಳ್ಳುವ ಶಾಸಕರು ಬ್ರಷ್ಟಾಚಾರಿ ಎಂಬುದಕ್ಕೆ ಇದಕ್ಕಿಂತ ಸಾಕ್ಷ್ಯ ಬೇಕಿಲ್ಲ ಎಂದು ಹೇಳಿದರು. ಹಿಂದಿನವರು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸಗಳನ್ನು ಮಾಡಿಸಿದ್ದಾರೆ, ಮೇಲ್ಸೇತುವೆಗಳ ಹಿಂದೆ ದಶಕಗಳ ಹೋರಾಟ ಇದೆ, ಜಕ್ಕಲ ಮಡಗು ಜಾಲಪ್ಪನವರು ರೂಪಿಸಿದ ಯೋಜನೆ, ಕ್ಷೇತ್ರದಲ್ಲಿ ಎಲ್ಲಾ ಯೋಜನೆ ನಾನೇ ಮಾಡಿದ್ದೇನೆ ಎಂದು ದೊಡ್ಡ ಬುರುಡೆ ಬಿಡುತ್ತಾರೆ, ಹಾಗಾದರೆ ಹಿಂದಿನ ಶಾಸಕರು ಏನೂ ಮಾಡಿಲ್ಲವೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಬಗ್ಗೆ ಒಲವು ಕಳೇದುಕೊಂಡಿದ್ದೇನೆ ಮುಂದಿನ ನಡೆ ಬಗ್ಗೆ ಬೆಂಬಲಿಗರೊಂದಿಗೆ ಚರ್ಚಿಸಿ ತೀರ್ಮಾನಿಸುತ್ತೇನೆ ಎಂದು ಹೇಳಿದರು.

Edited By

Ramesh

Reported By

Ramesh

Comments