ಮಾಜಿ ಕೇಂದ್ರ ಸಚಿವ ಶ್ರೀ ಆರ್.ಎಲ್. ಜಾಲಪ್ಪನವರಿಂದ ತಮ್ಮ ಪುತ್ರ ನರಸಿಂಹಸ್ವಾಮಿ ಪರವಾಗಿ ಮತ ಯಾಚನೆ
ಕೇಂದ್ರದ ಮಾಜಿ ಸಚಿವರಾದ ಆರ್.ಎಲ್.ಜಾಲಪ್ಪನವರು ದೊಡ್ಡಬಳ್ಳಾಪುರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ತಮ್ಮ ಮಗನಾದ ಜೆ.ನರಸಿಂಹಸ್ವಾಮಿರವರ ಪರವಾಗಿ ಚುನಾವಣಾ ಪ್ರಚಾರ ಮಾಡುವ ಸಲುವಾಗಿ ದೊಡ್ಡಬಳ್ಳಾಪುರ ನಗರಕ್ಕೆ ಆಗಮಿಸಿದ್ದರು. ನಗರದಲ್ಲಿರುವ ದೇವರಾಜ ಅರಸು ಕಾಲೇಜಿನಲ್ಲಿ ಎಲ್ಲರನ್ನು ಬೇಟಿಯಾಗಿ ಈ ಬಾರಿ ಚುನಾವಣೆಯಲ್ಲಿ ತಮ್ಮ ಪುತ್ರನಿಗೆ ಮತ ನೀಡಲು ಮನವಿ ಮಾಡಿದರು. ತಾಲ್ಲೂಕಿನ ಎಲ್ಲ ಬಿಜೆಪಿ ಮುಖಂಡರು ಹಾಜರಿದ್ದು ಜಾಲಪ್ಪನವರ ಆಶೀರ್ವಾದ ಪಡೆದುಕೊಂಡರು. ನರಸಿಂಹಸ್ವಾಮಿಯವರು ಮಾತನಾಡುತ್ತಾ ತಮ್ಮ ತಂದೆಯವರಿಗೂ ಈ ಬಾರಿ ನಾನು ಶಾಸಕನಾಗಬೇಕೆಂಬ ಆಸೆ ಇದೆ, ಇದು ನನ್ನ ಕೊನೆಯ ಚುನಾವಣೆ ಮೂರು ಬಾರಿ ನನ್ನನ್ನು ಶಾಸಕನಾಗಿ ಮಾಡಿದ್ದೀರಿ ಈ ಬಾರಿಯೂ ಆರಿಸಿ ತಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದರು.
Comments