ಶಾಸಕ ವೆಂಕಟರಮಣಯ್ಯ ವಿರುದ್ಧ ಹೋರಾಟ ನಿರಂತರ....ಸಿ.ಡಿ.ಸತ್ಯನಾರಾಯಣಗೌಡ

ವಿಧಾನಸಭೆ ಟಿಕೆಟ್ ಗೆ ಅರ್ಜಿ ಸಲ್ಲಿಸಿದ್ದೆ, ಹಿರಿತನ ಅನುಭವ ಲಘುವಾಗಿ ಪರಿಗಣಿಸಿ ಹಣವಂತರಿಗೆ ಟಿಕೆಟ್ ನೀಡಲಾಗಿದೆ, ನನ್ನ ಮೇಲೆ ಪಕ್ಷ ವಿರೋಧಿ ಚಟುವಟಿಕೆ ಆರೋಪ ಮಾಡುವ ನೈತಿಕ ಹಕ್ಕಿಲ್ಲ, ಸಂಸದ ವೀರಪ್ಪಮೊಯಿಲಿ ಹಾಗೂ ವರಿಷ್ಠರು ಪಕ್ಷ ನಿಷ್ಟರಿಗೆ ವಂಚನೆ ಮಾಡಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ, ಜಿ.ಪಂ. ಮಾಜಿ ಅಧ್ಯಕ್ಷ ಸತ್ಯನಾರಾಯಣಗೌಡ ಆಕ್ರೋಶ ವ್ಯಕ್ತ ಪಡಿಸಿದರು. ಸರ್ಕಾರಿ ನೌಕರರ ವರ್ಗಾವಣೆಯಿಂದ 45ಲಕ್ಷ ರೂ.ಬಂದಿದೆ, ಯ್ಳಿದ 55 ಲಕ್ಷ ರೂ. ವೈಯುಕ್ತಿಕ ಹಣ ಸೇರಿಸಿ ಮೊಯ್ಲಿ ಅವರನ್ನು ಗೆಲ್ಲಿಸಲು 1 ಕೋಟಿ ಖರ್ಚು ಮಾಡುತ್ತಿದ್ದೇನೆ ಎಂದು ಶಾಸಕರು ಸಹಜವಾಗಿ ಮಾತನಾಡುವಾಗ ಹೇಳಿದರು, ನಿಮ್ಮಿಂದಲೇ ದೊಡ್ಡಬಳ್ಳಾಪುರ ಅಲ್ಲ, ಯಲಹಂಕ-ಹಿಂದೂಪುರ ರಸ್ತೆ ನಿಮ್ಮ ಸಾಧನೆ ಅಲ್ಲ, ಅದು ಸಹಜ ಅಭಿವೃದ್ಧಿ ಎಂದರು. ಮೊಯ್ಲಿ ವಿರುದ್ಧ ಟೀಕೆ: ಚಿಕ್ಕಬಳ್ಳಾಪುರ ಲೋಕಸಭಆ ಕ್ಷೇತ್ರಕ್ಕೆ ಮೊಯ್ಲಿ ಟಿಕೆಟ್ ಅರಸಿ ಬಂದಾಗ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಅವರ ಕೈಜೋಡಿಸಿದ್ದೆ, ಇಂದು ನನ್ನ ಅರ್ಜಿ ನಿರ್ಲಕ್ಷಿಸಿ ಅವಮಾನ ಮಾಡಿದ್ದಾರೆ, ಇವರಿಗೆ ತಕ್ಕ ಉತ್ತರ ಸಿಗಲಿದೆ ಎಂದು ಹೇಳಿದರು.
Comments