ಏ.20 ಕ್ಕೆ ಶಾಸಕ ಪಿ.ಆರ್ ಸುಧಾಕರ್ ಲಾಲ್ ನಾಮಪತ್ರ
ಕೊರಟಗೆರೆ ಏ. :- ಜೆಡಿಎಸ್ ಪಕ್ಷ ಸದೃಡವಾಗಿದೆ ಎನ್ನುವುದನ್ನು ಕಾರ್ಯಕರ್ತರು ತೋರಿಸಬೇಕು ತಾಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಜೆ.ಎನ್ ನರಸಿಂಹರಾಜು ತಿಳಿಸಿದರು. ಪಟ್ಟಣ ದಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಶಾಸಕ ಪಿ.ಆರ್ ಸುಧಾಕರ್ ಲಾಲ್ ಏ. 20 ನಾಮಪತ್ರ ಸಲ್ಲಿಸಲಿದ್ದು ಅಂದು ರಾಜ್ಯಾದ್ಯಕ್ಷ ಹೆಚ್.ಡಿ ಕುಮಾಸ್ವಾಮಿಯವರ ಮಗ ಚಲನ ಚಿತ್ರ ನಟ ನಿಖಿಲ್ ಕುಮಾರಸ್ವಾಮಿ ಅಂದು ಪಾಲ್ಗೊಳ್ಳಲಿದ್ದಾರೆ ಎಂದರು.
ಶಾಸಕ ಪಿ.ಆರ್ ಸುಧಾಕರ್ ಲಾಲ್ ಮಾತನಾಡಿ ನಾಮಪತ್ರದ ದಿನವೇ ವಿಜಯೋತ್ಸವದ ರೀತಿ ಕಾರ್ಯಕರ್ತರು ಒಗ್ಗೂಡಬೇಕು, ಪ್ರತಿ ಹೋಬಳಿ ಮಟ್ಟದಿಂದಲೂ ಕಾರ್ಯಕ್ರಮಲ್ಲಿ ಭಾಗಿಯಾಗಬೇಕು, ಸುಮಾರು 20 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು ಕಾರ್ಯಕರ್ತರು ಹುಮ್ಮಸ್ಸಿನಿಂದ ಪಾಲ್ಗೊಳ್ಳಬೇಕು ಎಂದರು.
ಜಿಲ್ಲಾ ಕಾರ್ಯದ.ಕೆ ಮಹಾಲಿಂಗಪ್ಪ ಮಾತನಾಡಿ ಕಾರ್ಯಕರ್ತರು ನಾಮಪತ್ರ ಸಲ್ಲಿಕೆಯಂದು ಪಾಲ್ಗೊಳ್ಳುವುದರೊಂದಿಗೆ ಉತ್ತಮ ರೀತಿಯಲ್ಲಿ ವತರ್ಿಸಿ, ಯಾವುದೇ ಗೊಂದಲಗಳಿಗೆ ಅವಕಾಶ ಕೊಡದೇ ಪಾಲ್ಗೊಳ್ಳಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿ.ಪಂ ಸದಸ್ಯರಾದ ಶಿವರಾಮಯ್ಯ, ತಿಮ್ಮಣ್ಣ, ತಾಲೂಕು ಯುವ ಅಧ್ಯಕ್ಷ ಕೋಡ್ಲಹಳ್ಳಿ ವೆಂಕಟೇಶ್, ಪಕ್ಷದ ವಕ್ತಾರ ಟಿ. ಲಕ್ಷ್ಮೀಶ್, ಉಪಾಧ್ಯಕ್ಷರಾದ ಜಿ.ಎಂ ಕಾಮರಾಜು, ಸಿದ್ದಮಲ್ಲಪ್ಪ, ಕಾರ್ಯದರ್ಶಿ ಲಕ್ಷ್ಮಣ್, ತಾಲೂಕು ಕೆಎಂಎಫ್ ಮಾಜಿ ನಿದರ್ೇಶಕ ಗುಂಡಿನಪಾಳ್ಯ ಈಶ್ವರಪ್ಪ ತಾಲೂಕು ಎಸ್ಸಿ ಘಟಕ ಅಧ್ಯಕ್ಷ ಕೆ.ಎನ್ ಲಕ್ಷ್ಮಿನಾರಾಯಣ್,ಮಾಜಿ ತಾ.ಪಂ ಸದಸ್ಯ ಎಲ್.ವಿ ಪ್ರಕಾಶ್, ಹುಲೀಕುಂಟೆ ಗ್ರಾ.ಪಂ ಉಪಾಧ್ಯಕ್ಷ ಹೆಚ್.ಆರ್ ಶ್ರೀಧರ್, ಮುಖಂಡರಾದ ಜ್ಯೋತಿಪ್ರಕಾಶ್,ತಿಮ್ಮರಾಜು, ಸಿದ್ದರಾಜು ಸೇರಿದಂತೆ ಇತರರು ಇದ್ದರು. (ಚಿತ್ರ ಇದೆ) ಲ್.
Comments