ಕಾಂಗ್ರೇಸ್ ಜನಪರ ಕಾರ್ಯಕ್ರಮಗಳೇ ವರ: ಮೈಲಾರಪ್ಪ






ಕೊರಟಗೆರೆ ಏ. :- ಕಾಂಗ್ರೇಸ್ ಪಕ್ಷದ ಜನಪರ ಕಾರ್ಯಗಳನ್ನು ಜನರು ಪ್ರಶಂಸಿಸುತ್ತಿದ್ದು ಈ ಪ್ರಚಂಡ ಬಹುತದೊಂದಿಗೆ ಕಾಂಗ್ರೇಸ್ ಈ ಬಾರಿ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರೂ ಆದ ನಾಟಕ ಅಕಾಡಮಿ ಸದಸ್ಯ ಮೈಲಾರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಕಸಬಾ ವ್ಯಾಪ್ತಿಯ ಹಂಚಿಹಳ್ಳಿ ಗ್ರಾ.ಪಂ ವ್ಯಾಪ್ತಿಯ ಕಾಮರಾಜಹಳ್ಳಿ, ಬೋಡಬಂಡೇನಹಳ್ಳಿ, ದೊಡ್ಡಮಲ್ಲಯ್ಯನಪಾಳ್ಯ, ಮಲ್ಲೇಶಪುರ ಸೇರಿದಂತೆ ಇತರೆ ಗ್ರಾಮಗಳಲ್ಲಿ ಮತಯಾಚನೆ ಮಾಡಿ ಮಾತನಾಡಿದರು.
ದಿನದಿಂದ ದಿನಕ್ಕೆ ಕಾಂಗ್ರೇಸ್ ಪಕ್ಷದ ಭಲ ಹೆಚ್ಚುತ್ತಿದ್ದು ಎಲ್ಲಾ ಪಕ್ಷಗಳಿಂದಲೂ ಕಾಂಗ್ರೇಸ್ ಪಕ್ಷಕ್ಕೆ ಕಾರ್ಯಕರ್ತರು, ಮುಖಂಡರು ಸೇರ್ಪಡೆಗೊಳ್ಳುತ್ತಿದ್ದು ಇದರಿಂದ ಪಕ್ಷ ಕ್ಷೇತ್ರದಲ್ಲಿ ಇನಷ್ಟು ಸದೃಡಗೊಳ್ಳುತ್ತಿದೆ ಎಂದರು.
ತುಮಕೂರಿನ ಮಾಜಿ ನಗರಸಭಾ ಉಪಾಧ್ಯಕ್ಷ ವಾಲೆಚಂದ್ರಯ್ಯ ಮಾತನಾಡಿ ಡಾ. ಜಿ. ಪರಮೇಶ್ವರ್ ಎ.ಜೆ ಸದಾಶಿವ ಆಯೋಗದ ವಿರೋಧಿಗಳು ಎನ್ನುವ ತಪ್ಪು ಸಂದೇಶವನ್ನು ಜನರಿಗೆ ತಿಳಿಸುತ್ತಿದ್ದಾರೆ ಇದರಲ್ಲಿ ಯಾವುದೇ ಹುರುಳಿಲ್ಲ ಇದು ಸತ್ಯಕ್ಕೆ ದೂರವಾದ ಮಾತು ಪರಮೇಶ್ವರ್ ಇದರ ಪರವಾಗಿದ್ದಾರೆ ಯಾರ ಮಾತಿಗೂ ಕಿವಿಕೊಡಬಾರದು ಎಂದು ಮನವಿ ಮಾಡಿದರು.
ಪ್ರಚಾರದಲ್ಲಿ ತಾ.ಪಂ ಉಪಾಧ್ಯಕ್ಷೆ ನರಸಮ್ಮ, ತಾಲೂಕು ಬ್ಲಾಕ್ ಕಾಂಗ್ರೇಸ್ ಮಹಿಳಾ ಅಧ್ಯಕ್ಷ ಜಯಮ್ಮ, ಹಂಚಿಹಳ್ಳಿ ಗ್ರಾ.ಪಂ ಅಧ್ಯಕ್ಷ ಶಿವರಾಮಯ್ಯ, ತುಮಕೂರು ಎಪಿಎಂಸಿ ಮಾಜಿ ಅಧ್ಯಕ್ಷ ಕೋಡ್ಲಹಳ್ಳಿ ಅಶ್ವಥನಾರಾಯಣ,ಮಾಜಿ ತಾ.ಪಂ ಸದಸ್ಯ ಹನುಮಂತರಾಯಪ್ಪ, ಕೊರಟಗೆರೆ ಎಪಿಎಂಸಿ ಸದಸ್ಯ ಹೆಚ್.ಜಿ ಜಯರಾಮಯ್ಯ, ಗ್ರಾ.ಪಂ ಸದಸ್ಯ ಕೆಂಪಣ್ಣಮಲ್ಲೇಶ್, ಮುಖಂಡರಾದ ನರಸಿಂಹಮೂರ್ತಿ ಮಯೂರ ಗೋವಿಂದರಾಜು, ಸಕ್ಕರೆ ದೇವರಾಜು, ನಾರಾಯಣ್, ಕುಮಾರ್, ಜಗದೀಶ್, ರಾಮಮೂರ್ತಿ ಸೇರಿದಂತೆ ಇತರರು ಇದ್ದರು. ( ಚಿತ್ರ ಇದೆ)
Comments