ಮೇಲು-ಕೀಳು ತೊಡದು ಹಾಕಿದವರು ಬಸವಣ್ಣನವರು: ಅನಿಲ್ ಕುಮಾರ್ ಪಾಟೀಲ್

18 Apr 2018 6:53 PM |
323 Report

ಕೊರಟಗೆರೆ :- ಸಮಾಜದಲ್ಲಿ ಮೇಲು-ಕೀಳು ಎನ್ನುವ ಭಾವನೆಯನ್ನು ತೊಡೆದು ಹಾಕಲು ಬಸವಣ್ಣರು ದೇವಮಾನವರಾಗಿ ಬಂದವರು ಎಂದು ಕೆಪಿಸಿಸಿ ಕಾರ್ಯದಶರ್ಿಯೂ ಆದ ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿ ವಹಿಸಿರುವ ಅನಿಲ್ ಕುಮಾರ್ ಪಾಟೀಲ್ ತಿಳಿಸಿದರು.

    ಪಟ್ಟ ಣದಲ್ಲಿರುವ ಕಾಂಗ್ರೇಸ್ ಕಚೇರಿಯಲ್ಲಿ ಬಸವ ಜಯಂತಿಯ ಅಂಗವಾಗಿ ಬಸವಣ್ಣರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಜಾತಿಯ ಸಂಕೋಲೆಯೊಳಗೆ ಸಿಲುಕಿ ನಲುಗುತ್ತಿದ್ದ ಸಮಾಜಕ್ಕೆ ತಮ್ಮ ವಚನಗಳ ಮೂಲಕ ನಾವೆಲ್ಲರೂ ಏನು... ಭಗವಂತ ಎಂದರೆ ಯಾರು... ನಮಗೆ ಕೈಲಾಸ ಎಂದರೆ ಯಾವುದು ಎನ್ನುವಂತಹ ವಿಚಾರದಾರೆಗಳನ್ನು ಸರಳೀಕರಿಗೆ ತಿಳಿಸಿದಂತಹ ಮಹಾನ್ ಚೇತನ ಎಂದರು.
    ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷ ಮುರುಳೀಧರ್ ಹಾಲಪ್ಪ ಮಾತನಾಡಿ ಬಸವಣ್ಣ ಒರ್ವ ಆದರ್ಶ ಪುರುಷ ಕಾಯಕವೇ ಕೈಲಾಸ... ಆಡಂಬರದ ಪೂಜೆಗಳಿಂದ ಯಾವುದೇ ಲಾಭವಿಲ್ಲ... ನಿತ್ಯ ಮಾಡುವಂತಹ ಕಾಯಕವನ್ನೇ ಸಮರ್ಪಕವಾಗಿ ಮಾಡಿ ಅದರಲ್ಲೇ ಕೈಲಾಸವನ್ನು ಕಾಣುವಂತಹ ಕಲ್ಪನೆಯನ್ನು ತೋರಿಸಿಕೊಟ್ಟು ಕ್ರಾಂತಿ ಪುರುಷ ಎಂದು ಹೇಳಿದರು.
    ಕಾರ್ಯಕ್ರಮದಲ್ಲಿ ರಾಜ್ಯ ತೆಂಗು ಮತ್ತು ನಾರು ಅಭಿವೃದ್ಧಿ ನಿಮಗದ ಅಧ್ಯಕ್ಷ ವೆಂಕಟಾಚಲಯ್ಯ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ರಾಮಚಂದ್ರಪ್ಪ, ಸೋಮಣ್ಣ, ರಾಜ್ಯ ಒಬಿಸಿ ಘಟಕ ಕಾರ್ಯದರ್ಶಿ ಮಹೇಶ್ ಚೌದರಿ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ದಸ್ತಗೀರ್, ಹಾಲಪ್ಪ ಪ್ರತಿಷ್ಠಾನದ ಸದಸ್ಯರಾದ ಕೆ.ಎನ್ ನಟರಾಜ್, ಕೃಷ್ಣಪ್ಪ, ಕೃಷ್ಣಮೂರ್ತಿ ಮುಖಂಡರಾದ ಕೆ. ರಾಘವೇಂದ್ರ, ನರಸಿಂಹ, ಸೇರಿದಂತೆ ಇತರರು ಇದ್ದರು. ( ಚಿತ್ರ ಇದೆ)

Edited By

Raghavendra D.M

Reported By

Raghavendra D.M

Comments