ಅನಾಧಿಕಾಲದ ಬಸವಣ್ಣ ಮತ್ತು 12 ನೇ ಶತಮಾನದ ಬಸವಣ್ಣ ಇಬ್ಬರೂ ಒಂದಾಗಿದ್ದಾರೆ: ಡಾ. ಶಿವಾನಂದ ಶಿವಾಚಾರ್ಯ

18 Apr 2018 6:48 PM |
353 Report

ಕೊರಟಗೆರೆ :- ಅನಧಿಕಾಲಕ  ಬಸವಣ್ಣ ಮತ್ತು 12 ನೇ ಶತಮಾನದ ಬಸವಣ್ಣ ಇಬ್ಬರೂ ಒಂದು ಗೂಡಿ ಇಂದು ಬಸವ ಜಯಂತಿಯಾಗಿದೆ ಎಂದು ತುಮಕೂರಿನ ಹಿರೇಮಠದ ಪೀಠಾದ್ಯಕ್ಷ ಡಾ. ಶಿವಾನಂದ ಶಿವಾಚಾರ್ಯ ತಿಳಿಸಿದರು. 

 

ತಾಲೂಕಿನ ಕೋಳಾಲ ಹೋಬಳಿಯ ಕೋಳಾಲ ಮುರುಡ ಬಸವೇಶ್ವರ  ದೇವಾಲಯದಲ್ಲಿ  ಅದ್ದೂರಿ  ಬಸವ  ಜಯಂತೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು.

            ಗ್ರಾಮಾಂತರ ಪ್ರದೇಶದಲ್ಲಿ ನಂದಿಯನ್ನು ಪೂಜಿಸುವಂತಹ ವಾಡಿಕೆ ಅನಾದಿಕಾಲದಿಂದಲೂ ಇದೆ ನಂತರ ಕ್ರಾಂತಿಯೋಗಿಯಾಗಿ ಸಮಾಜದಲ್ಲಿ ಮೇಲು-ಕೀಳುಗಳನ್ನು ತೊಡೆದುಹಾಕಲು ಪ್ರಯತ್ನ ಮಾಡಿದ ಬಸಣ್ಣನವರೂ  ಸಾಮಾನ್ಯ ಜನರ ದೃಷ್ಟಿಯಲ್ಲಿ ಪೂಜ್ಯರಾಗಿ ಎರಡೂ ಆಚರಣೆಯನ್ನು ಒಂದಾಗಿ ಆಚರಣೆ ನಡೆಯುತ್ತಿದೆ ಎಂದರು.   

 

ಕೋಳಾಲ  ಗ್ರಾಮದಲ್ಲಿ  200 ಕ್ಕೂ ಹೆಚ್ಚು ಮಹಿಳೆಯರು ಆರತಿ ಹೊತ್ತು ನಡೆದರು , ವೀರಭಧ್ರಕುಣಿತ,ಕರಡಿ ವಾದ್ಯಗಳ ಲಿಂಗದಬೀರರ ಸಮೇತ ಮುರುಡ ಬಸವೇಶ್ವರ ದೇವರಿಗೆ ಸ್ವಾಮಿಗಳು ಪೂಜಾಕೈಂರ್ಯಗಳು ನಡೆದವು.

 

 ಕಾರ್ಯಕ್ರಮದಲ್ಲಿ ತಾ.ಪಂ ಅಧ್ಯಕ್ಷ ಕೆಂಪರಾಮಯ್ಯ,   ವೀರಶೈವ ಸಂಘದ ಅದ್ಯಕ್ಷ  ಜಿ .ಎಸ್ ಪ್ರಕಾಶ್ , ಪುಟ್ಟಬಸಯ್ಯ, ಸೋಹನ್ ಕುಮಾರ್ , ಶಂಕರ್ ,ನಾಗರಾಜು, ಶಿವಕುಮಾರ್ ,ಕೋಡ್ಲಹಳ್ಳಿ  ಹನುಮೇಶ್  ,ಬಸವರಾಜ್ , ಪುರುಷೋತ್ತಮ್, ಕರಿಯಣ್ಣ, ನರಂಸಿಮೂತಿ೯ ,ಕೆ ಎಂ ಗಿರೀಶ್  ಸೇರಿದಂತೆ ಇತರರು ಇದ್ದರು. ( ಚಿತ್ರ ಇದೆ)

 

ವೀರಶೈವ ಮತ್ತು ಲಿಂಗಾಯತ ಬೇರೆ-ಬೇರೆ ಅಲ್ಲ…ಎರಡೂ ಸಹ ಒಂದೇ ಇದರ ಬಗ್ಗೆ ಅವಾಂತ ಸೃಷ್ಟಿಮಾಡುತ್ತಿದ್ದಾರೆ ಇದು ಹೆಚ್ಚು ಕಾಲ ನಿಲ್ಲುವುದಿಲ್ಲ… ಧರ್ಮವನ್ನು ಯಾವುದೇ ಕಾರಣಕ್ಕೂ ಒಡೆಯಲಾಗುವುದಿಲ್ಲ

                -ಶಿವಾನಂದ ಶಿವಾಚಾರ್ಯ, ಹಿರೇಮಠ,

Edited By

Raghavendra D.M

Reported By

Raghavendra D.M

Comments