ದೊಡ್ಡಬಳ್ಳಾಪುರದಲ್ಲಿ 12 ಮಹಿಳಾ ಸ್ನೇಹಿ ಪಿಂಕ್ ಮತಗಟ್ಟೆಗಳು ಶೇ.100% ಮತದಾನಕ್ಕೆ
ತಾಲ್ಲೂಕಿನಲ್ಲಿ ಶೇ.1೦೦% ಮತದಾನ ದಾಖಲಿಸಲು ಬಿಎಲ್ ಓ ಬಳಸಿಕೊಳ್ಳಲಾಗುವುದು, ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಪ್ರಯತ್ನ ಮಾಡುತ್ತಿದೆ, ಮತದಾರರಿಗೆ ಸಲಹೆ, ಸಹಕಾರ ನೀಡುವ ಜವಾಬ್ದಾರಿ ಬಿಎಲ್ ಓಗಳಿಗೆ ನೀಡಲಾಗಿದೆ ಎಂದು ಬಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ಲತಾ ಹೇಳಿದರು. ಮತದಾರರ ಮಾಹಿತಿ ಸಂಗ್ರಹಣೆಯಲ್ಲಿ ತಾಲ್ಲೂಕು ಮುಂದಿದ್ದು 12 ಪಿಂಕ್ ಮತಗಟ್ಟೆ ಸ್ಥಾಪಿಸಲಾಗುವುದು, ಮತದಾರರಿಗೆ ಏಳು ದಿನ ಮುಂಚಿತವಾಗಿ ಮತ ಚೀಟಿ ವಿತರಿಸುವ ಮೂಲಕ ಅರಿವು ಮೂಡಿಸಲಾಗುವುದು ಎಂದು ತಹಸೀಲ್ದಾರ್ ಮೋಹನ್ ತಿಳಿಸಿದರು.
Comments