ವಿಪಕ್ಷಗಳನ್ನು ತೊರೆದ ಪ್ರಭಾವಿ ಮುಖಂಡರಿಗೆ ಅಧಿಕೃತ 'ಹೊರೆ' ಹೊರಿಸಿದ ದೇವೇಗೌಡ್ರು..!!
ಕರ್ನಾಟಕ ವಿಧಾನಸಭಾ ಚುನಾವಣೆ ಬರುತ್ತಿದ್ದಂತೆ ರಾಜ್ಯ ರಾಜಕೀಯದ ಕಾವು ಹೆಚ್ಚುತ್ತಿದೆ. ಇಂದು ಬೆಂಗಳೂರಿನ ಜೆಡಿಎಸ್ ಕಛೇರಿ ಜೆಪಿ ಭವನದಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಸಮ್ಮುಖದಲ್ಲಿ ಸಿ.ವಿ. ರಾಮನ್ ನಗರದ ಪಿ.ರಮೇಶ್, ಚಿಕ್ಕಪೇಟೆ ಕ್ಷೇತ್ರದ ಹೇಮಚಂದ್ರ ಸಾಗರ್, ಆರ್.ಆರ್. ನಗರದ ಜಿ.ಎಚ್. ರಾಮಚಂದ್ರ ಹಾಗೂ ಆರ್.ಆರ್. ನಗರದ ಹನುಮಂತರಾಯಪ್ಪ ನವರು ಅಧಿಕೃತವಾಗಿ ಜೆಡಿಎಸ್ ಗೆ ಸೇರ್ಪಡೆಗೊಂಡಿದ್ದಾರೆ.
ಇದೆ ಸಂದರ್ಭದಲ್ಲಿ ಜಿ.ಎಚ್. ರಾಮಚಂದ್ರ ಅವರ ಸೊಸೆ ನಟಿ ಅಮೂಲ್ಯ ಮತ್ತು ಅವರ ಮಗ ಜಗದೀಶ್ ಕೂಡ ಸೇರ್ಪಡೆಗೊಂಡರು. ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, ಇಂದು ಅತ್ಯಂತ ಸಂತೋಷದ ದಿನ. ಹಲವು ಪ್ರಭಾವಿ ನಾಯಕರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗ್ಗಿದ್ದಾರೆ. ನಾಳೆ ಮತ್ತೆ ರಾಯಚೂರು, ಹುಬ್ಬಳ್ಳಿಯಿಂದ ಅನ್ಯ ಪಕ್ಷದ ಮುಖಂಡರು ಜೆಡಿಎಸ್ ಗೆ ಸೇರ್ಪಡೆಯಾಗಲಿದ್ದಾರೆ. ಇನ್ನು ನಾಲ್ಕೈದು ದಿನಗಳ ಕಾಲ ಸಾಕಷ್ಟು ನಾಯಕರು ಜೆಡಿಎಸ್ ಗೆ ಸೇರ್ಪಡೆಯಾಗಲಿದ್ದಾರೆ ಎಂದರು.
Comments