ಜೆಡಿಎಸ್ ಗೆ ಸೇರ್ಪಡೆಗೊಂಡ ಸ್ಯಾಂಡಲ್ ವುಡ್ ನ ಈ ನಟಿ....!!



ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕೀಯ ರಂಗೇರುತ್ತಿದೆ. ಕನ್ನಡ ಸಿನಿಮಾರಂಗದಲ್ಲಿ ಬಾಲನಟಿಯಾಗಿ ಅಭಿನಯಿಸಿ, ಚೆಲುವಿನ ಚಿತ್ತಾರದ ನಾಯಕಿನಟಿಯಾಗಿ ಯಶಸ್ಸು ಕಂಡು ಚಲನಚಿತ್ರರಂಗದಿಂದ ದೂರವಿರುವ ನಟಿ ಅಮೂಲ್ಯ ಅವರು ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.
ಬಿಜೆಪಿಯಲ್ಲಿ ಶಾಸಕ ಸ್ಥಾನಕ್ಕೆ ಪೈಪೋಟಿ ನಡೆಸಿದ್ದ ಅಮೂಲ್ಯ ಅವರ ಮಾವ, ಮಾಜಿ ಬಿಬಿಎಂಪಿ ಮಾಜಿ ಸದಸ್ಯ ರಾಮಚಂದ್ರ ಅವರು ಬಿಜೆಪಿಯಲ್ಲಿ ಟಿಕೆಟ್ ಸಿಗದೇ ಬಂಡಾಯವೆದ್ದಿದ್ದರು. ಈಗ ರಾಮಚಂದ್ರ ಹಾಗೂ ಅವರ ಸೊಸೆ ನಟಿ ಅಮೂಲ್ಯ ಅಧಿಕೃತವಾಗಿ ಜೆಡಿಎಸ್ ಗೆ ಸೇರ್ಪಡೆಗೊಂಡಿದ್ದಾರೆ ಎಂಬ ಮಾಹಿತಿ ಕೇಳಿ ಬರುತ್ತಿದೆ. ಬೆಂಗಳೂರಿನಲ್ಲಿ ಇಂದು ನಡೆದ ಸಭೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಅಮೂಲ್ಯ, ಹಾಗೂ ಅವರ ಮಾವ ಮಾಜಿ ಕಾರ್ಪೋರೇಟರ್ ರಾಮಚಂದ್ರ ಹಾಗೂ ಪತಿ ಜಗದೀಶ್ ಅವರು ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಜೆಡಿಎಸ್ ನಿಂದ ಇನ್ನು ಟಿಕೆಟ್ ಘೋಷಣೆಯಾಗದ ಹಿನ್ನಲೆಯಲ್ಲಿ ರಾಜರಾಜೇಶ್ವರಿ ನಗರದಿಂದ ಈ ಬಾರಿಯ ವಿಧಾನಸಭಾ ಚುನಾವಣೆಗೆ ಮಾಜಿ ಕಾರ್ಪೋರೇಟರ್ ಅಮೂಲ್ಯ ಅವರ ಮಾವ ರಾಮಚಂದ್ರ ಅವರಿಗೆ ಜೆಡಿಎಸ್ ನಿಂದ ಟಿಕೆಟ್ ನೀಡಲಾಗುವುದು ಎನ್ನಲಾಗುತ್ತಿದೆ.
Comments