ಬಿಜೆಪಿಯ ಮುಖಂಡರ ಚಿತ್ತ ಜೆಡಿಎಸ್ ನತ್ತ…!!
ಕರ್ನಾಟಕ ವಿಧಾನ ಸಭಾ ಚುನಾವಣೆ ಹತ್ತಿರ ಸಮೀಪಿಸುತ್ತಿದ್ದಂತೆ ರಾಜಕೀಯದ ಕಾವು ಹೆಚ್ಚುತ್ತಿದೆ. ವಿಪಕ್ಷಗಳ ಮುಖಂಡರು ಜೆಡಿಎಸ್ ನತ್ತ ಮುಖಮಾಡುತ್ತಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಪಣ ತೊಟ್ಟಿರುವ ಜೆಡಿಎಸ್ ದಿನದಿಂದ ದಿನಕ್ಕೆ ಪ್ರಬಲಗೊಳುತ್ತಿದೆ. ಇದಕ್ಕೆ ಸಾಕ್ಷಿ, ಕುಮಾರ ಪರ್ವಕ್ಕೆ ಹರಿದು ಬರುತ್ತಿರುವ ಜನಸಾಗರ.
ಜೆಡಿಎಸ್ ನ ಈ ಬೆಳವಣಿಗೆ ಕಂಡು ರಾಷ್ಟ್ರೀಯ ಪಕ್ಷಗಳು ದಿಗ್ಬ್ರಮೆಗೊಂಡಿದ್ದಾರೆ. ಬಿಜೆಪಿ ಮುಖಂಡ ಹೇಮ ಚಂದ್ರ ಸಾಗರ್ ಅವರನ್ನು ಜೆಡಿಎಸ್ ಮುಖಂಡ ಶರವಣ ಇಂದು ಭೇಟಿ ಮಾಡಿದ್ದಾರೆ. ಈ ವೇಳೆ ಹೇಮಚಂದ್ರ ಅವರನ್ನು ಶರವಣ ಜೆಡಿಎಸ್ ಗೆ ಆಹ್ವಾನಿಸಿದ್ದಾರೆ.
Comments