ವಿಪಕ್ಷಗಳನ್ನು ತೊರೆದ ನಾಯಕರು ಜೆಡಿಎಸ್ ಗೆ ಸೇರ್ಪಡೆ...!!
ಬೆಂಗಳೂರಿನ ಮಹಾಲಕ್ಷಿಪುರ ಕ್ಷೇತ್ರದ ಕುರುಬರಹಳ್ಳಿಯ ಕುಮಾರ ವ್ಯಾಸ ವೃತ್ತ (ಕುರುಬರ ಹಳ್ಳಿ ವೃತ್ತ)ದಲ್ಲಿ ಅಣ್ಣಾ ಡಾ:ರಾಜ್ ಕುಮಾರ್ ಪ್ರತಿಮೆಯ ಸನ್ನಿದಿಯಲ್ಲಿ ಜೆಡಿಎಸ್ ನ ಬೃಹತ್ ವಿಕಾಸ ಪರ್ವದ ಸಮಾವೇಶ ನಡೆಯಿತು. ಜೆಡಿಎಸ್ ಮತ್ತು ಬಿಎಸ್ ಪಿ ಪಕ್ಷದ ಬಾವುಟಗಳು ಹಾರಾಡುತ್ತಿದ್ದವು. ಜನ ಸಾಗರದಲ್ಲಿ ಜೆಡಿಎಸ್ ನ ಜೈಕಾರದ ಅಲೆಗಳು ಅಪ್ಪಳಿಸುತ್ತಿದ್ದವು.
ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರ ಕಣ್ಣುಗಳಲ್ಲಿದದ್ದು ಒಂದೇ ಕಾತುರ,ಅವರ ಮನದಲ್ಲಿ ಆ ವ್ಯಕ್ತಿಯ ಆಗಮನದ ನಿರೀಕ್ಷೆ,ಏನೋ ಕಾತುರು ಏನೋ ಉತ್ಸಾಹ,ನಾಯಕನ ಆಗಮನಕ್ಕೆ ಅಲ್ಲಿದ್ದವರು ತುಂಬು ನಿರೀಕ್ಷೆಯಲ್ಲಿ ಕಾದಿದ್ದರು.ಅವರೆಲ್ಲರ ನಿರೀಕ್ಷೆಯಂತೆ ರೈತ ನಾಯಕ ,ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಗಮಿಸಿದರು. ಜನಸಾಗರದಿಂದ ಮುಗಿಲು ಮುಟ್ಟಿದ ಜಯಕಾರ,ಉಕ್ಕಿ ಬಂದ ಹರ್ಷೋದ್ಗಾರ.ಜನ ಸಮೂಹಕ್ಕೆ ಕೈ ಮುಗಿದು .ಡಿ. ಕುಮಾರಸ್ವಾಮಿ ಧನ್ಯರಾದರು. ಮಹಾಲಕ್ಷಿಪುರ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ವಿಕಾಸ ಪರ್ವ ಸಮಾವೇಶದಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು, ಗೋಪಾಲಯ್ಯನವರು ಹೇಳಿದಂತೆ ಸೂರಿಲ್ಲದವರಿಗೆ ಮನೆ ಕೊಡುವ ಯೋಜನೆಯನ್ನ ಮಾಡುತ್ತೆನೆ ,ನನ್ನದು ಏಕಾಂಗಿ ಹೋರಾಟ, ಅವರಿಗಾದರೆ ದೆಹಲಿಯಿಂದ ಬರುತ್ತಾರೆ, ಬಿಜೇಪಿಗೂ ಕಾಂಗ್ರೆಸ್ ಗೂ ಅವಕಾಶ ಕೊಟ್ಟಿದ್ದೀರಿ ನನಗೆ ಒಂದೇ ಒಂದು ಅವಕಾಶ ಕೊಡಿ ” ಎಂದು ವಿನಮ್ರವಾಗಿ ಜನತೆಯನ್ನ ಕೇಳಿಕೊಂಡರು. ಇದೇ ಕಾರ್ಯಕ್ರಮದಲ್ಲಿ ರಘು ಗೌಡ,ಯತಿರಾಜ್ ನಾಯ್ಡು, ಲಕ್ಕಣ ಮುಂತಾದವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
Comments