ಜೆಡಿಎಸ್ ಪರ ಪ್ರಚಾರ ಮಾಡಲಿದ್ದಾರಾ ಸ್ಯಾಂಡಲ್ ವುಡ್ ನ ಈ ಸ್ಟಾರ್ ನಟ..!!



ಟಗರು ಚಿತ್ರದ ಪ್ರಮೋಶನ್ ಗಾಗಿ ನಟ ಶಿವರಾಜ್ ಕುಮಾರ್ ಹಾಸನದ ಎಸ್ ಬಿ ಜಿ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಈ ವೇಳೆ ತಮ್ಮ ನೆಚ್ಚಿನ ನಾಯಕರನ್ನು ನೋಡಲು ನೂರಾರು ಮಂದಿ ಅಭಿಮಾನಿಗಳು ಮುಗಿ ಬಿದ್ದಿದ್ದರು. ಕೆಲವರಂತೂ ಶಿವಣ್ಣನ ಜೊತೆ ಸೆಲ್ಫಿ ತೆಗೆದುಕೊಳ್ಳಲು ಪೈಪೋಟಿಗೆ ಬಿದ್ದಿದ್ದರು.
ಈ ವೇಳೆ ಮಾತನಾಡಿದ ಅವರು, ವಿಭಿನ್ನ ಚಿತ್ರವನ್ನು ಜನರು ಮೆಚ್ಚಿಕೊಂಡಾಗ ತುಂಬಾ ಖುಷಿಯಾಗುತ್ತದೆ ಎಂದರು.ಇಂಥ ಚಿತ್ರ ನೀಡಿದ ನಿರ್ದೇಶಕರು ಹಾಗೂ ತಂಡಕ್ಕೆ, ಪ್ರೋತ್ಸಾಹಿಸಿದ ಅಭಿಮಾನಿಗಳಿಗೆ ಧನ್ಯವಾದ ಹೇಳಿದರು. ಯಾವುದೇ ಸಿನಿಮಾ ಗೆದ್ದಾಗ ತುಂಬಾ ಖುಷಿಯಾಗುತ್ತದೆ. ಇನ್ನೂ 20 ವರ್ಷ ಅಭಿನಯಸುವ ಮನೋಬಲ ಬರುತ್ತದೆ. ಮುಂದೆ ವಿಲನ್ ಸೇರಿದಂತೆ ಹಲವು ಚಿತ್ರಗಳು ಬರುತ್ತಿದ್ದು, ಇದೇ ರೀತಿ ಬೆಂಬಲ ನೀಡುವಂತೆ ಚಿತ್ರ ಪ್ರೇಮಿಗಳಲ್ಲಿ ಮನವಿ ಮಾಡಿದರು. ಇದೇ ವೇಳೆ ಈ ಬಾರಿಯ ಚುನಾವಣೆಯಲ್ಲಿ ಉತ್ತಮ ವ್ಯಕ್ತಿ ಹಾಗೂ ಪಕ್ಷಗಳಿಗೆ ಮತ ಹಾಕಿ ಎಂದು ಮನವಿ ಮಾಡಿದ ಶಿವಣ್ಣ, ಒಳ್ಳೇ ಪಕ್ಷ ಬಂದರೆ ನಾಡಿಗೆ ಉತ್ತಮ ಮಳೆ ಬೆಳೆ ಆಗಲಿದೆ ಎಂದು ಆಶಿಸಿದರು. ಮಧು ಬಂಗಾರಪ್ಪ ಸೇರಿದಂತೆ ನಾನು ಯಾವುದೇ ಅಭ್ಯರ್ಥಿ ಪರ ಚುನಾವಣಾ ಪ್ರಚಾರಕ್ಕೆ ಹೋಗುವುದಿಲ್ಲ ಎಂದು ಹ್ಯಾಟ್ರಿಕ್ ಹೀರೋ ಸ್ಪಷ್ಟಪಡಿಸಿದರು. ಮಧು ಅದನ್ನು ಬಯಸುವುದಿಲ್ಲ. ಪತ್ನಿ ಗೀತಾ ಪ್ರಚಾರಕ್ಕೆ ಹೋಗುತ್ತಾರೆ ಎಂದರು. ಚುನಾವಣೆಯಲ್ಲಿ ಹಣ ಹೆಂಡದ ಆಮಿಷ ಹಂಚುವ ಬಗ್ಗೆ ಪರೋಕ್ಷವಾಗಿ ಬೇಸರವ್ಯಕ್ತಪಡಿಸಿದ ಅವರು, ಹಾಗೆ ಮಾಡುವವರಲ್ಲೇ ಜಾಗೃತಿ ಮೂಡಬೇಕು ಎಂದು ಆಶಿಸಿದರು.
Comments