ಚುನಾವಣಾ ಹಿನ್ನಲೆ ಸಮೀಕ್ಷೆ ಕುರಿತು ಭವಿಷ್ಯ ನುಡಿದ ದೇವೇಗೌಡ್ರು..!!
ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜ್ಯ ರಾಜಕೀಯ ರಂಗೇರುತ್ತಿದೆ. ಜೆಡಿಎಸ್ ಕಚೇರಿ ಜೆ.ಪಿ. ಭವನದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, ಈ ಚುನಾವಣೆಯಲ್ಲಿ ಜೆಡಿಎಸ್ 120 ಸ್ಥಾನ ಗೆದ್ದು ಅಧಿಕಾರಕ್ಕೆ ಬರುವುದು ಖಚಿತ. ಯಾವುದೇ ಸಮೀಕ್ಷೆಗಳನ್ನೂ ನಾನು ನಂಬುವುದಿಲ್ಲ ಎಂದು ಭವಿಷ್ಯ ನುಡಿದರು.
2013 ರ ಚುನಾವಣೆಯಲ್ಲಿ ಜೆಡಿಎಸ್‌ಗೆ 13 ಸ್ಥಾನ ಬರುತ್ತೆ ಅಂತ ಸಮೀಕ್ಷೆಯಲ್ಲಿ ಹೇಳಿದ್ದರು, 40 ಸ್ಥಾನ ಬಂತು. ಇದೀಗ 43 ಅಂತ ಹೇಳಿದ್ದಾರೆ, 120 ಸ್ಥಾನ ಗೆಲ್ಲಲಿದೆ ಎಂದು ಹೇಳಿದರು. ಇಂಡಿಯಾ ಟುಡೆ ಸಮೀಕ್ಷೆಯಲ್ಲಿ ಕೊಟ್ಟಿರೋ ಅಂಕಿಯನ್ನು 3 ರಿಂದ ಗುಣಿಸಿದರೆ ಬರುವುದೇ ಜೆಡಿಎಸ್ ಫಲಿತಾಂಶ. ನನಗೆ ರಾಜ್ಯದ ಜನರಲ್ಲಿ ವಿಶ್ವಾಸವಿದೆ. ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಜನತೆ ತಿರಸ್ಕರಿಸಲಿದ್ದಾರೆ ಎಂದರು. ರಾಜ್ಯ ಸರ್ಕಾರ ಎಲ್ಲರನ್ನೂ ಉದ್ಧಾರ ಮಾಡುತ್ತೇವೆ ಎಂದು ಜಾತಿ ಜನಗಣತಿ ಮಾಡಿದ್ರು ಯಾಕೆ ವರದಿ ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನಿಸಿದರು.
Comments