ನೇಕಾರರಿಗೆ ಸೀರೆ ಬ್ಯಾಂಕ್ ಸ್ಥಾಪನೆ....ಯಡಿಯೂರಪ್ಪ ಭರವಸೆ






ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಸೀರೆ ಬ್ಯಾಂಕ್ ಸ್ಥಾಪಿಸಿ ನೇಕಾರರು ನೇಯುವ ಸೀರೆಗಳಿಗೆ ಉತ್ತಮ ಬೆಲೆ ದೊರೆಯುವಂತೆ ಮಾಡಲಾಗುವುದು, ದೇಶದಲ್ಲಿನ ರೈತರು ಹಾಗೂ ನೇಕಾರರು ಎರಡು ಕಣ್ಣುಗಳಿದ್ದಂತೆ ಈ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಪ್ರಮಾಣದಲ್ಲಿ ಸೌಲಭ್ಯ ಕಲ್ಪಿಸಲಾಗುವುದು, ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ವಿವಿಧ ಪಕ್ಷಗಳ ಮುಖಂಡರ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದರು. ಸತ್ಯಪ್ರಕಾಶ್ ನೇತೃತ್ವದಲ್ಲಿ ಸಾವಿರಾರು ಮಂದಿ ಬಿಜೆಪಿಗೆ ಸೇರ್ಪಡೆಗೊಂಡಿರುವುದು ಪಕ್ಷಕ್ಕೆ ಆನೆ ಬಲ ಬಂದಂತಾಗಿದ್ದು, ಮುಂಬರುವ ಚುನಾವಣೆಯಲ್ಲಿ ದೊಡ್ದಬಳ್ಳಾಪುರದಲ್ಲಿ ಬಿಜೆಪಿ ಗೆಲುವು ನಿಸ್ಚಿತ ಎಂದು ಅಭ್ಯರ್ಥಿ ನರಸಿಂಹಸ್ವಾಮಿ ಹೇಳಿದರು. ಇದೇ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಕೆ.ವಿ.ಸತ್ಯಪ್ರಕಾಶ್, ಕಾಂಗ್ರೆಸ್ ಮುಖಂಡ ಕೆ.ಟಿ.ಕೃಷ್ಣ, ರಜನಿ ರಾಜಣ್ಣ ಬಿಜೆಪಿಗೆ ಸೇರ್ಪಡೆಗೊಂಡರು. ನಾಯಕರಾದ ಶ್ರೀರಾಮುಲು, ಪುಟ್ಟಸ್ವಾಮಿ, ಹನುಮಂತರಾಯಪ್ಪ ಸೇರಿದಂತೆ ತಾಲ್ಲೂಕಿನ ಎಲ್ಲಾ ನಾಯಕರು ಹಾಜರಿದ್ದರು.
Comments