ಮುತ್ಯಾಲಮ್ಮ ದೇವಸ್ಥಾನ ಸೇವಾ ದತ್ತಿ ಸಮಿತಿ ವಶಕ್ಕೆ...ಸುಪ್ರೀಂ ಕೋರ್ಟ್ ಆದೇಶ
ನಗರದ ಮುತ್ಯಾಲಮ್ಮ ದೇವಸ್ಥಾನದ ಆಡಳಿತವನ್ನು ಶುಕ್ರವಾರ ಮುತ್ಯಾಲಮ್ಮ ಸೇವಾ ದತ್ತಿ ಸಮಿತಿಯವರು ಸುಪ್ರೀಂ ಕೋರ್ಟ್ ಆದೇಶದಂತೆ ವಶಕ್ಕೆ ಪಡೆದುಕೊಂಡರು, ಈ ಕುರಿತು ಮಾಹಿತಿ ನೀಡಿದ ಉಪಾಧ್ಯಕ್ಷ ನಾಗೇಶ್ ಏಪ್ರಿಲ್ 11 ರಂದು ಸುಪ್ರೀಂ ಕೋರ್ಟ್ ಆದೇಶ ನೀಡಿ ಮುತ್ಯಾಲಮ್ಮ ದೇವಸ್ಥಾನ ಆಡಳಿತ ಮಂಡಳಿ ಸೇವಾ ಟ್ರಸ್ಟ್ ಎಚ್. ನಾಗರಾಜ್ ವಶದಲ್ಲಿದ್ದ ದೇವಾಲಯವನ್ನು ಸಮಿತಿಯವರು ವಹಿಸಿಕೊಳ್ಳುವಂತೆ ಆದೇಶ ನೀಡಿತ್ತು, ನಾಗರಾಜ್ ರವರು ಎರಡು ದಿನಗಳ ಕಾಲಾವಕಾಶ ನೀಡುವಂತೆ ಪೋಲೀಸರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಒಪ್ಪಿಕೊಂಡಿದ್ದರು. ಆದರೆ ಮೂರು ದಿನ ಕಳೆದರೂ ದೇವಾಲಯದ ಆಡಳಿತವನ್ನು ಸಮಿತಿಗೆ ವಹಿಸಿ ಕೊಟ್ಟಿಲ್ಲ, ಹೀಗಾಗಿ ಶುಕ್ರವಾರ ದೇವಾಲಯದಲ್ಲಿ ದೇವಿಗೆ ಸುತ್ತಮುತ್ತಲಿನ ಏಳೂರಿನ ಗ್ರಾಮಗಳ ಮುಖಂಡರು ಸೇರಿ ಪೂಜೆ ಸಲ್ಲಿಸುವ ಮೂಲಕ ಆಡಳಿತವನ್ನು ವಹಿಸಿಕೊಂಡಿದ್ದೇವೆ, ಚುನಾವಣೆಯ ನಂತರ ಜಾತ್ರೆಯನ್ನು ನಡೆಸಲಾಗುವುದು ಎಂದು ತಿಳಿಸಿದರು. ಪ್ರಧಾನ ಅರ್ಚಕ ಅನಂತ್ ದೇವಸ್ಥಾನದಲ್ಲಿ ಇರುವ ಎಲ್ಲ ವಸ್ತುಗಳ ಕುರಿತು ಸಮಿತಿಗೆ ಮಾಹಿತಿ ನೀಡಿದರು. ಆಡಳಿತ ವಹಿಸಿಕೊಳ್ಳುವ ಎಲ್ಲ ಪ್ರಕ್ರಿಯೆಗಳನ್ನು ವಿಡಿಯೋ ಚಿತ್ರೀಕರಣ ಮಾಡಲಾಯಿತು. ಸಮಿತಿ ಅಧ್ಯಕ್ಷರು ಸೇರಿದಂತೆ ಎಲ್ಲ ಸದಸ್ಯರೂ ಹಾಜರಿದ್ದರು.
Comments