ಸಮೀಕ್ಷೆ ಕುರಿತು ಸಿದ್ದು ವಿರುದ್ಧ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಎಚ್ ಡಿಕೆ..!!
ನಗರದ ಪುರಭವನ ಆವರಣದಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸುದ್ದಿಗೋಷ್ಠಿಯೊಂದಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಮಾತನಾಡಿ ಎಚ್.ಡಿ. ಕುಮಾರಸ್ವಾಮಿ ಅವರು, ಚುನಾವಣಾ ಸಮೀಕ್ಷೆ ಏನಿದೆಯೋ ಅದು ತಲೆಕೆಳಗಾಗಿ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಜೆಡಿಎಸ್ ಕಿಂಗ್‍ಮೇಕರ್ ಅಲ್ಲ, ಕಿಂಗ್ ಆಗುತ್ತದೆ ಎಂದು ಹೇಳಿದರು. ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ಜೆಡಿಎಸ್ ಪರ ಚುನಾವಣಾ ಪ್ರಚಾರಕ್ಕೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ತೆಲುಗು ಕನ್ನಡಿಗರ ಮತ ಕ್ರೋಢೀಕರಣಕ್ಕೆ ಅವರು ಪ್ರಚಾರ ನಡೆಸಲಿದ್ದಾರೆ. ಹಾಗೆಯೇ ಮಾಯಾವತಿ ಅವರು ಸಹ ಮೈಸೂರು ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದರು. 100 ಸ್ಥಾನದಲ್ಲಿ ಜೆಡಿಎಸ್ ಇರುತ್ತದೆ. ಕಾಂಗ್ರೆಸ್ 40 ಸ್ಥಾನಗಳಲ್ಲಿ ಇರುತ್ತೆ, ಬೇಕಿದ್ದರೆ ಸ್ಟಾಂಪ್ ಪೇಪರ್‌ನಲ್ಲಿ ಬರೆದು ಕೊಡುತ್ತೇನೆ ಎಂದು ಎಚ್.ಡಿ. ಕುಮಾರಸ್ವಾಮಿ ಯವರು ಖಾಸಗಿ ವಾಹಿನಿಯ ಸಮೀಕ್ಷೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.ಇಂಡಿಯಾ ಟುಡೆ ಸಮೀಕ್ಷೆ ಬಗ್ಗೆ ನನ್ನ ತಕರಾರಿಲ್ಲ. ನಾನು ಕಿಂಗ್ ಮೇಕರ್ ಅಲ್ಲ, ಜನ ನನ್ನನ್ನು ಕಿಂಗ್ ಮಾಡೋಕೆ ತೀರ್ಮಾನ ಮಾಡಿದ್ದಾರೆ ಎಂದರು. 2004ರಲ್ಲಿ ತಮ್ಮ ಪಕ್ಷದ ಹೆಸರನ್ನೇ ಹೇಳದೆ ಎರಡು ಸ್ಥಾನಕ್ಕೆ ನಿಲ್ಲಿಸಿದ್ರು. ಆಗ ನಾವು 52 ಸ್ಥಾನ ಗೆದ್ದಿದ್ದೆವು. ಹಿಂದಿನ ದಿನಗಳಿಗಿಂತ ಈಗ ಪಕ್ಷದ ವರ್ಚಸ್ಸು ಹೆಚ್ಚಾಗಿದೆ. ಇಂಡಿಯಾ ಟುಡೆ ಹೇಳಿರುವ ಕಾಂಗ್ರೆಸ್ ನೂರು ಸ್ಥಾನ, ಜೆಡಿಎಸ್‌ಗೆ ಬರುತ್ತೆ. ಕಾಂಗ್ರೆಸ್ 40 ಸ್ಥಾನಕ್ಕೆ ಇಳಿಯುತ್ತದೆ. ಜೆಡಿಎಸ್ 100 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುತ್ತದೆ. ಬೇಕಿದ್ದರೆ ಸ್ಟಾಂಪ್ ಪೇಪರ್‌ನಲ್ಲಿ ಬರೆದುಕೊಡುತ್ತೇನೆ ಎಂದರು. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು, ಇಂಡಿಯಾ ಟುಡೆ ಅವರ ಜೊತೆ ಕುಳಿತು ಯಾವ ರೀತಿ ಸಮೀಕ್ಷೆ ಮಾಡಿಸಿದ್ದಾರೆ ಎಂಬ ಮಾಹಿತಿ ನನ್ನ ಬಳಿ ಇದೆ ಎಂದು ಹೊಸ ಬಾಂಬ್ ಸಿಡಿಸಿದರು. ಸಿಎಂ ಸಿದ್ದರಾಮಯ್ಯ ಅವರು ರಾಮನಗರ ಮತ್ತು ಚನ್ನಪಟ್ಟಣಕ್ಕೆ ಬಂದು ಒಂದು ತಿಂಗಳು ಕ್ಯಾಂಪ್ ಮಾಡಲಿ. ಆ ಎರಡು ಕ್ಷೇತ್ರಗಳಿಗೆ ನಾನು ಹೋಗದೆ ಇಲ್ಲಿ ಅವರೇನು ಮಾಡ್ತಾರೋ ಮಾಡಲಿ. ಅಲ್ಲಿ ನಾನೇ ಗೆಲ್ತೀನಿ ಎಂದು ಸವಾಲು ಹಾಕಿದರು.
Comments